ಎನ್ಎಸ್ಎಸ್ ನಿಂದ ಪರಿಸರ ದಿನಾಚರಣೆ

ಗಂಗೊಳ್ಳಿ:  ಜೀವನ ಎನ್ನುವುದರಲ್ಲೇ ವನವಿದೆ. ವನವಿಲ್ಲದೇ ಜೀವನವಿಲ್ಲ. ದನಿಯನ್ನು ಎತ್ತರಿಸಿ ಸಮುದ್ರ ಮಟ್ಟವನ್ನಲ್ಲ ಎನ್ನುವ ಘೋಷಣೆ ಕೇವಲ ಘೋಷಣೆಯಾಗಿ ಉಳಿಯಬಾರದು. ಅದರ ಅರ್ಥವನ್ನು ಸರಿಯಾಗಿ ಗ್ರಹಿಸಿಕೊ0ಡು ಅದರ ಆಶಯವನ್ನು ನಾವುಗಳು ಕಾರ್ಯರೂಪಕ್ಕಿಳಿಸಬೇಕಾದ ಅಗತ್ಯತೆಯಿದೆ. ನಮ್ಮ  ನಮ್ಮ ಸುತ್ತಮುತ್ತಲಿನ ವಾತವರಣವನ್ನು ಶುದ್ಧವಾಗಿಟ್ಟುಕೊಳ್ಳುವುದು ನಮ್ಮ ಪ್ರಥಮ ಆದ್ಯತೆಯಾಗಬೇಕು. ಪ್ರತಿಯೊಬ್ಬರೂ ತಮ್ಮ ನಾಗರಿಕ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದಲ್ಲಿ ಪರಿಸರ ಸ0ರಕ್ಷಣೆ ಸಾಧ್ಯ ಎ0ದು ಕನ್ನಡ ಉಪನ್ಯಾಸಕ ಎಚ್. ಸುಜಯೀ0ದ್ರ ಹ0ದೆ ಅಭಿಪ್ರಾಯ ಪಟ್ಟರು.
       ಅವರು ವಿಶ್ವ ಪರಿಸರ ದಿನಾಚರಣೆಯ ಅ0ಗವಾಗಿ ಗ0ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಹಮ್ಮಿಕೊ0ಡಿದ್ದ `ಪರಿಸರ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ವಯೋಜನಾಧಿಕಾರಿ ಭಾಸ್ಕರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಪ್ರಾ0ಶುಪಾಲರಾದ ಆರ್.ಎನ್.ರೇವಣ್ ಕರ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಸುಗುಣ ಆರ್ ಕಾರ್ಯಕ್ರಮ ನಿರ್ವಹಿಸಿದರು. ಶಾಲೆಟ್ ಲೋಬೋ ಧನ್ಯವಾದಗೈದರು
ವರದಿ  : ನರೇ0ದ್ರ ಎಸ್ ಗ0ಗೊಳ್ಳಿ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com