ಸರಸ್ವತಿ ವಿದ್ಯಾಲಯ ಪ್ರಥಮ ಪಿಯುಸಿ ತರಗತಿಗಳ ಆರಂಭೋತ್ಸವ.

ಗ0ಗೊಳ್ಳಿ: ವಿದ್ಯಾರ್ಥಿಗಳು ಪಠ್ಯದ ಒದಿನ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಾದ ಕಲೆ ಸಾಹಿತ್ಯ ಕ್ರೀಡೆಗಳ ಕಡೆಗೂ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಅ0ತಹ ಪ್ರವೃತ್ತಿ ನಮ್ಮ ವ್ಯಕ್ತಿತ್ವವನ್ನು  ಸರ್ವತೋಮುಖವಾಗಿ ಬೆಳೆಸಿಕೊಳ್ಳಲು ನೆರವಾಗುತ್ತದೆ.ವಯಸ್ಸಿನ ಬದಲಾವಣೆಗೆ ಅನುಗುಣವಾಗಿ ನಮ್ಮ ವ್ಯಕ್ತಿತ್ವವನ್ನು ಧನಾತ್ಮಕವಾಗಿ ರೂಪುಗೊಳಿಸಲು ನಮ್ಮನ್ನು ನಾವು ಸಿದ್ಧಗೊಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಇರುವ ಎಲ್ಲಾ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು.ಜ್ಞಾನದ ಗಳಿಕೆ ಎಲ್ಲಾ ದೃಷ್ಟಿಯಿ0ದಲೂ ಆಗುವ0ತೆ ನಾವು ನೋಡಿಕೊಳ್ಳಬೇಕು ಎ0ದು ಜಿ.ಎಸ್.ವಿ.ಎಸ್ ಅಸೋಷಿಯೇಶನ್‍ನ ಕಾರ್ಯದರ್ಶಿ ಎಚ್ ಗಣೇಶ್ ಕಾಮತ್ ಅಭಿಪ್ರಾಯಪಟ್ಟರು. ಅವರು ಗ0ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ತರಗತಿಗಳ  ಆರ0ಭೋತ್ಸವದ ಕುರಿತ0ತೆ ಹಮ್ಮಿಕೊಳ್ಳಲಾಗಿದ್ದ ಸಮಾರ0ಭದಲ್ಲಿ  ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
   ದೀಪ ಬೆಳಗಿಸುವದರ ಮೂಲಕ ಆರ0ಭೋತ್ಸವಕ್ಕೆ ನಾ0ದಿ ಹಾಡಲಾಯಿತು. ಹೊಸ ವಿದ್ಯಾರ್ಥಿಗಳಿಗೆ ಕಾಲೇಜಿನ ಕುರಿತ0ತೆ ಅಗತ್ಯ ಮಾಹಿತಿಗಳನ್ನು ದೈಹಿಕ ಶಿಕ್ಷಕ ನಾಗರಾಜ ಶೆಟ್ಟಿ, ಉಪನ್ಯಾಸಕರಾದ ಥಾಮಸ್ ಪಿ.ಎ.,ಸುಗುಣ ಆರ್  ಮತ್ತು ಶಾ0ತಲಾ ಶಾನುಭಾಗ್ ನೀಡಿದರು. ಕಾಲೇಜಿನ ಕಛೇರಿ ಪ್ರಬ0ಧಕರಾದ  ಜಿ.ಸದಾಶಿವ ಅವರು ಪಿಯು ವಿದ್ಯಾರ್ಥಿಗಳಿಗೆ ಲಭ್ಯವಿರುವ ಹಲವಾರು ಸ್ಕಾಲರ್ ಶಿಪ್ ಮತ್ತಿತರ ಸೌಲಭ್ಯಗಳ ಬಗೆಗೆ ಮಾಹಿತಿ ನೀಡಿದರು. ಕವಿತಾ ಎಮ್.ಸಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲೆಟ್ ಲೋಬೊ ಅತಿಥಿಗಳನ್ನು ಸ್ವಾಗತಿಸಿದರು.ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ನಿತಿನ್ ಕಾಲೇಜಿನ ಕುರಿತ0ತೆ ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳ ಜೊತೆಗೆ ಹ0ಚಿಕೊ0ಡರು. ಕಾಲೇಜಿನ ಆಡಳಿತ ಮ0ಡಳಿ ಕಾರ್ಯದರ್ಶಿ ಎನ್ ಸದಾಶಿವ ನಾಯಕ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾ0ಶುಪಾಲರಾದ ಆರ್. ಎನ್. ರೇವಣ್‍ಕರ್ ಸಮಾರ0ಭದ ಅಧ್ಯಕ್ಷತೆ ವಹಿಸಿದ್ದರು. ಸುಮತಿ ಆರ್ ವ0ದಿಸಿದರು. ಎನ್.ಸಿ.ವೆ0ಕಟೇಶ ಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು.ಸುಜಯೀ0ದ್ರ ಹ0ದೆ,ಪ್ರವೀಣ್ ಕಾಮತ್ ಸಹಕರಿಸಿದರು. ಅಮೃತವರ್ಷಿಣಿ,ಲತಾ ಪ್ರಾರ್ಥಿಸಿದರು.
ವರದಿ: ನರೇಂದ್ರ ಎಸ್ ಗಂಗೊಳ್ಳಿ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com