ಗಂಗೊಳ್ಳಿ: ಉಡುಪಿ ಜಿಲ್ಲಾ ಪಂಚಾ­ಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯಿತಿ ಮತ್ತು ಎಸ್‌ವಿ ಪ್ರೌಢಶಾಲೆ ಸಹಯೋಗದಲ್ಲಿ ಈಚೆಗೆ ಮಲೇರಿಯ ಮಾಸಾಚರಣೆ ನಡೆಯಿತು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶ್ವೇತಾ ಸೊಳ್ಳೆಗಳಿಂದ ಹರಡುವ ರೋಗಗಳ ಕುರಿತು ಮಾಹಿತಿ ನೀಡಿ ಅವುಗಳ ವಿರುದ್ಧ ಕೈಗೊಳ್ಳ­ಬೇಕಾದ ಕ್ರಮಗಳನ್ನು ವಿವರಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಷ್ಮಾ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಹೇಶರಾಜ್ ಪೂಜಾರಿ, ತಾಲ್ಲೂಕು ಆರೋಗ್ಯ ಮಾಹಿತಿ ಅಧಿಕಾರಿ ಶ್ರೀಧರ ನಾಯಕ್,ಉಪ ಪ್ರಾಂಶುಪಾಲ ವಾಮನ­ದಾಸ ಭಟ್,  ದೈಹಿಕ ಶಿಕ್ಷಣ ಶಿಕ್ಷಕ  ಕೆ. ಸದಾನಂದ ವೈದ್ಯ, ಕಿರಿಯ ಆರೋಗ್ಯ ಸಹಾಯಕಿಯರಾದ ಜಯಶ್ರೀ, ಅರ್ಪಿತಾ, ಮನು, ಆಶಾ ಕಾರ್ಯಕರ್ತೆ­ಯರು ಇದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com