ಗರ್‌ ಗರ್‌ ಮಂಡ್ಲ ಸಿನೆಮಾಕ್ಕೆ ಅದ್ಧೂರಿ ಓಪನಿಂಗ್*ಸಿನೆಮಾಕ್ಕೆ ಅದ್ಧೂರಿ ಚಾಲನೆ
* ಕಿಕ್ಕಿರಿದು ತುಂಬಿದ ಅಭಿಮಾನಿಗಳು
* ಅಭಿಮಾನಿಗಳಿಗೆ ಹುರುಪು ತುಂಬಿದ ಚಿತ್ರದ ಕಲಾವಿದರು
*ಬ್ಯಾಂಡು, ಪಟಾಕಿಗಳಿಂದ ಸದ್ದು ಮಾಡಿದ ಚಿತ್ರಮಂದಿರ
* ಪ್ರೇಕ್ಷಕರ ಅದ್ಭುತ ಪ್ರತಿಕ್ರಿಯೆ
* 10 ವರ್ಷಗಳ ಬಳಿಕ ಎರಡೂ ಚಿತ್ರಮಂದಿರಗಳಲ್ಲಿ ದಾಖಲೆಯ ಪ್ರೇಕ್ಷಕರು

ಕುಂದಾಪುರ:ಕುಂದನಾಡಿನ ಚಿತ್ರರಸಿಕರಲ್ಲಿ ಬಾರಿ ನಿರೀಕ್ಷೆಯನ್ನು ಹುಟ್ಟುಹಾಕಿದ್ದ  ಚಿತ್ರ 'ಗರ್‌ ಗರ್‌ ಮಂಡ್ಲ ' ಶುಕ್ರವಾರ ತೆರೆ ಕಂಡಿದ್ದು ಪ್ರೇಕ್ಷಕ ಪ್ರಭುವಿನಿಂದ ಅದ್ಧೂರಿ ಪ್ರತಿಕ್ರಿಯೆ ದೊರೆತಿದೆ.
     ಕುಂದಾಪುರ ಕನ್ನಡ ಭಾಷೆಯಲ್ಲಿಯೇ ತಯಾರಾದ ಚಿತ್ರ ಕುಂದಾಪುರದ ವಿನಾಯಕ ಹಾಗೂ ಬೈಂದೂರಿನ ಶಂಕರ ಚಿತ್ರಮಂದಿರದಲ್ಲಿ ಬಿಡುಗಡೆಯಾಯಿತು. ಎರಡೂ ಚಿತ್ರಮಂದಿರಗಳಲ್ಲಿ ನೂರರು ಮಂದಿ ಪ್ರೇಕ್ಷಕರು ಚಿತ್ರದ ಮೊದಲ ಪ್ರದರ್ಶನಕ್ಕೆ ಸಾಕ್ಷಿಯಾದರು. ಕುಂದಾಪುರದಲ್ಲಿ ವಿನಾಯಕ ಚಿತ್ರ ಮಂದಿರವನ್ನು ತಳಿರು ತೋರಣಗಳಿಂದ ಶೃಂಗಾರಮಾಡಿ , ಬ್ಯಾಂಡು ವಾದನಗಳ ಮೂಲಕ ಮೊದಲ ಪ್ರದರ್ಶನಕ್ಕೆ ಅದ್ದೂರಿಯ ಚಾಲನೆಯನ್ನು ಕಂಡುಕೊಳ್ಳಲಾಯಿತು. ಬೈಂದೂರಿನಲ್ಲಿಯೂ ಚಿತ್ರಮಂದಿರವನ್ನು ಶೃಂಗರಿಸಿ ಪಟಾಕಿ ಸಿಡಿಸಿ ಚಿತ್ರಕ್ಕೆ ಭರ್ಜರಿ ಚಾಲನೆ ನೀಡಲಾಯಿತು.

 ಚಿತ್ರದ ಕಲಾವಿದರು, ತಂತ್ರಜ್ಞರು ಮೊದಲ ಪ್ರದರ್ಶನದಲ್ಲಿ ಕುಂದಾಪುರ ಹಾಗೂ ಮ್ಯಾಟ್ನಿ ಪ್ರದರ್ಶನಕ್ಕೆ ಬೈಂದೂರಿನ ಚಿತ್ರಮಂದಿರಕ್ಕೆ ಆಗಮಿಸಿ ಚಿತ್ರ ವಿಕ್ಷೀಸಿದ್ದು ಪ್ರೇಕ್ಷಕರಿಗೆ ಹೊಸ ಉತ್ಸಾಹ ತುಂಬಿದಂತಾಗಿತ್ತು.
   
  ನಾಲ್ಕೂ ಪ್ರದರ್ಶನಗಳಿಗೆ ಜನರು ಕಿಕ್ಕಿರಿದು ನೆರೆದಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com