ಬಾಲಕನಿಗೆ ನೆರವು ಬೇಕು

ಕಾರ್ಕಳ: ಹೊಟ್ಟೆ ಬಗೆದು ಹೊರಬಂದ ಕರುಳು ಜತೆಗೆ ಹೃದಯಕ್ಕೂ ಶಸ್ತ್ರಚಿಕಿತ್ಸೆಯ ಅಗತ್ಯ. ಹೃದಯವಂತರು ಸಹಕಾರ ನೀಡುವಿರಾ? ಈ ಬಾಲಕ ಸ್ವಸ್ತಿಕ್. 6 ವರ್ಷದ ಬಾಲಕ. ಹುಟ್ಟಿನಿಂದಲೇ ಅನಾರೋಗ್ಯದಿಂದ ಬಳಲುತ್ತಿರುವ ನತದೃಷ್ಟ. ಈತ ಜನಿಸಿದ ನಾಲ್ಕೇ ದಿನದಲ್ಲಿ ಹೊಟ್ಟೆಯೊಳಗಿನ ಕರುಳು ಹೊಟ್ಟೆಯನ್ನು ಬಗೆದು ಹೊರಬಂದಿತ್ತು. ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಎಲ್ಲರಿಗೂ ಮಲವಿಸರ್ಜನೆಯಾಗುವ ರೀತಿಯಲ್ಲೇ ಜೋಡಿಸಲು ಯತ್ನಿಸಿದರೂ ಆ ದಿನದಲ್ಲಿ ಫಲಕಾರಿಯಾಗಲಿಲ್ಲ. ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು ಹೊಟ್ಟೆಯ ಕೆಳಭಾಗದಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿ ಅಲ್ಲಿಂದಲೇ ಮಲ ವಿಸರ್ಜನೆಯಾಗುವಂತೆ ಮಾಡಿದರು.

        ಈಗ 6 ವರ್ಷದ ಬಾಲಕನಾದ ಸ್ವಸ್ತಿಕ್‌ಗೆ ಸತತ 7 ಬಾರಿ ಶಸ್ತ್ರಚಿಕಿತ್ಸೆಯಾಗಿದೆ. 7ನೇ ಬಾರಿ ಹೊಟ್ಟೆಯ ಕೆಳಭಾಗದಲ್ಲಿ ಶಸ್ತ್ರಚಿಕಿತ್ಸೆ ವಿಫಲವಾದಾಗ ಮತ್ತೆ ಆತನ ಮಲ ವಿಸರ್ಜನೆಯನ್ನು ಹೊಟ್ಟೆಯ ಮೇಲ್ಭಾಗದಲ್ಲಿ ಕಲ್ಪಿಸಲಾಗಿದೆ. ನಿತ್ಯ ನೋವು: ಪ್ರತಿ ನಿತ್ಯ ದೇಹದ ಭಾಗವನ್ನು ನೋವಿನಲ್ಲೇ ಕಳೆದು ದುಃಖ ಪಡುತ್ತಿರುವ ಈ ಹುಡುಗನಿಗೆ ನಿತ್ಯ ರಕ್ತಸ್ರಾವವಾಗುತ್ತಿದೆ. ಕೆಮ್ಮು ಬರುವಾಗ, ಆಟ ಆಡಿದಾಗ ಕರುಳೇ ಹೊಟ್ಟೆಯಿಂದ ಹೊರ ಬರುತ್ತದೆ. ಈತನ ದೇಹ ಪ್ರಕ್ರಿಯೆಯನ್ನು ಸರಿಪಡಿಸಲು ತಜ್ಞ ವೈದ್ಯರು ಮುಂದಿನ ದಿನಗಳಲ್ಲಿ ಪರಿಣಾಮಕಾರಿ ಶಸ್ತ್ರ ಚಿಕಿತ್ಸೆ ನಡೆಸಿ ಎಲ್ಲರಂತೆ ಈತನನ್ನು ಸರಿಪಡಿಸುವ ಬಗ್ಗೆ ತಿಳಿಸಿದ್ದಾರೆ. ಲಕ್ಷಾಂತರ ಖರ್ಚು: ಈತನ ಚಿಕಿತ್ಸೆಗೆ ಲಕ್ಷಾಂತರ ಹಣದ ಅವಶ್ಯಕತೆ ಇದೆ. ಮರಾಠಿ ನಾಯ್ಕ್ ಕುಟುಂಬದ ಈತನ ತಂದೆ ವೆಂಕಪ್ಪ ಮಾನಸಿಕ ರೋಗಿ, ತಾಯಿ ಬೀಡಿ ಕಟ್ಟಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಸ್ವಂತ ಮನೆಯೂ ಇವರಿಗಿಲ್ಲ. ಮನೆಯಲ್ಲಿ ತೀರಾ ಬಡತನ. ವೈದ್ಯ ಚಿಕಿತ್ಸೆ ಮಾಡಬೇಕಾದಲ್ಲಿ ಹೃದಯವಂತರೂ ನೀಡುವ ಹಣದಿಂದ ಮಾತ್ರ ಈತ ಗುಣಮುಖವಾಗಬಲ್ಲ. ಆರ್ಥಿಕ ಸಹಾಯ ನೀಡುವ ಹೃದಯವಂತರು ಸಿಂಡಿಕೇಟ್ ಬೇಂಕ್ ಪಳ್ಳಿ ಇದರ ಖಾತೆ ಸಂಖ್ಯೆ 01942200035970 ಕಳುಹಿಸುವಂತೆ ಅಥವಾ ದೂರವಾಣಿ ಸಂಖ್ಯೆ 9483912819 ಸಂಪರ್ಕಿಸುವಂತೆ ಕೋರಲಾಗಿದೆ. ಹದಯಕ್ಕೂ ಶಸ್ತ್ರಚಿಕಿತ್ಸೆ: ಈ ಕಾಯಿಲೆಯೊಂದಿಗೆ ಹೃದಯದಲ್ಲಿ ರಂಧ್ರವೂ ಇರುವ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ. ಹೃದಯಕ್ಕೂ ಶಸ್ತ್ರಚಿಕಿತ್ಸೆ ಅಗತ್ಯವಿರುವ ಬಗ್ಗೆ ತಿಳಿಸಿದ್ದಾರೆ.

courtesy: VK
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com