ದೇವಸ್ಥಾನಗಳ ಜೀರ್ಣೋದ್ದಾರದಿಂದ ಲೋಕಕಲ್ಯಾಣ: ಕೆ. ಗೋಪಾಲ ಪೂಜಾರಿ

ಹೊಸೂರು : ದೇವಸ್ಥಾನಗಳನ್ನು ಜೀರ್ಣೋದ್ದಾರಗೊಳಿಸುವುದರ ಮೂಲಕ ಕ್ಷೇತ್ರಾಭಿವೃದ್ದಿಯಾಗುತ್ತಿರುವುದು ಭಗವತ್‌ ಭಕ್ತರ ಶ್ರದ್ದಾ ಭಕ್ತಿಯ ಫಲ. ಎಂದು ಬೆ„ಂದೂರು ಶಾಸಕ ಕೆ. ಗೊಪಾಲ ಪೂಜಾರಿ ಹೇಳಿದ್ದಾರೆ.

ಅವರು ರಂದು ಹೊಸೂರು ಗ್ರಾಮದ ಕದಳಿಯಲ್ಲಿ ರೂ. 1. 65 ಕೋಟಿ ವೆಚ್ಚದಲ್ಲಿ ಪುನರ್‌ ನಿರ್ಮಾಣಗೊಳ್ಳುತ್ತಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರದ ಗುದ್ದಲಿ ಪೂಜೆಯಲ್ಲಿ ಭಾಗವಹಿಸಿ ಅನಂತರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿ ಕದಳಿ ದೇವಸ್ಥಾನದ ಅಭಿವೃದ್ದಿಗೆ ಸರಕಾರದ ವತಿಯಿಂದ ರೂ. 10 ಲಕ್ಷ ನೀಡುವುದಲ್ಲದೇ ಧಾರ್ಮಿಕ ಕ್ಷೇತ್ರಗಳ ಅಭಿವೃದ್ದಿಗೆ ಸಂಪೂರ್ಣ ಸಹಕಾರ ನೀಡುವುದರಲ್ಲಿ ಬದ್ದನಾಗಿರುವುದಾಗಿ ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ ಸ್ಥಳೀಯ 123 ಮನೆಗಳ ಆರಾಧ್ಯ ದೇವರಾದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರಕ್ಕೆ ಎಲ್ಲಾ ಭಕ್ತರು ಧನಸಹಾಯ ಮಾಡುವುದರೊಡನೆ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಬೇಕೆಂದರು. ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಮಾಜಿ ಧರ್ಮದರ್ಶಿ ಡಾ| ಸುಧಾಕರ ನಂಬಿಯಾರ್‌ ಮಾತನಾಡುತ್ತಾ ಕದಳಿ ಕ್ಷೇತ್ರದ ಮಹತ್ವವನ್ನು ವಿವರಿಸಿದರಲ್ಲದೇ ಕ್ಷೇತ್ರದ ಜೀರ್ಣೋದ್ದಾರದಿಂದ ಪರಿಸರದ ಗ್ರಾಮಸ್ಥರ ಶ್ರೇಯಸ್ಸಾಗುವುದೆಂದರು. 
ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅನುವಂಶೀಯ ಆಡಳಿತ ಮುಕ್ತೇಸರ ಸೀತಾರಾಮ ಶೆಟ್ಟಿ, ಚಿತ್ತೂರು ಗ್ರಾ. ಪಂ. ಅಧ್ಯಕ್ಷ ಸುರೇಂದ್ರ ಶೆಟ್ಟಿ, ಕದಳಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ರಮಾನಂದ ಮಧ್ಯಸ್ಥ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ವಂಡಬಳ್ಳಿ ಜಯರಾಮ ಶೆಟ್ಟಿ ಸ್ವಾಗತಿಸಿದರು. ರಮಾನಂದ ಮಧ್ಯಸ್ಥ ಪ್ರಾಸ್ತಾವಿಕವಾಗಿ ಮಾತನಾಡಿದರು. ರತ್ನಾಕರ ಆಚಾರ್‌ ಧನ್ಯವಾದ ಸಮರ್ಪಿಸಿದರು. ಶಿಕ್ಷಕ ರಾಘವೇಂದ್ರ ಗುಲ್ವಾಡಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಸುಧೀಂದ್ರ ಉಡುಪ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com