ದ.ಕ., ಉಡುಪಿ: ಅಧಿಕೃತ ಐಟಿಐಗಳ ಪಟ್ಟಿ

ಮಂಗಳೂರು : ವ್ಯಾವಹಾರಿಕ ಉದ್ದೇಶದಿಂದ ಮಾನ್ಯತೆ ಇಲ್ಲದ ಕೆಲವು ಖಾಸಗಿ ಸಂಸ್ಥೆಗಳು ಐಟಿಐ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಮಾನ್ಯತೆ ಪಡೆದಿರುವ ಅಧಿಕೃತ ಐಟಿಐಗಳ ಪಟ್ಟಿ ತಯಾರಿಸಲಾಗಿದೆ ಎಂದು ಉಭಯ ಜಿಲ್ಲೆಗಳ ಐಟಿಐ ನೌಕರರ ಸಂಘದ ಪ್ರಕಟನೆ ತಿಳಿಸಿದೆ.

ಮಾನ್ಯತೆ ಪಡೆದ ಐಟಿಐ ಕಾಲೇಜುಗಳ ಪಟ್ಟಿ ಇಂತಿದೆ. ಉಡುಪಿ ಮತ್ತು ದ.ಕ. ಜಿಲ್ಲೆಯ ಎಲ್ಲ ಸರಕಾರಿ ಐಟಿಐಗಳು, ಮೂಲ್ಕಿ ತಪೋವನ ತೋಕೂರು ಎಸ್‌. ಕೋಡಿ ಬಳಿಯಿರುವ ರಾಮಕೃಷ್ಣ ಪೂಂಜಾ ಐಟಿಐ, ನಾರಾಯಣ ಗುರು ಐಟಿಐ ಕುದ್ರೋಳಿ ಮಂಗಳೂರು, ಸಂತ ಅಲೋಶಿಯಸ್‌ ಐಟಿಐ ಮಂಗಳೂರು, ಹೆಬಿಕ್‌ ಐಟಿಐ ಮಂಗಳೂರು, ಸಂತ ಜೋಸೆಫ್‌ ಐಟಿಐ ಜೆಪ್ಪು ಮಂಗಳೂರು, ಕೆಎಸಿಇಎಸ್‌ ಸ್ಟಿಚ್‌ ಕ್ರಾಫ್ಟ್ ಐಟಿಐ ಬಲ್ಮಠ, ಮಂಗಳೂರು, ಹೆಬಿಕ್‌ ಐಟಿಐ ಬಲ್ಮಠ ಮಂಗಳೂರು, ಕ್ಸೇವಿಯರ್‌ ಐಟಿಐ ಅಸೈಗೋಳಿ ಕೊಣಾಜೆ, ಸಯ್ಯದ್‌ ಮದನಿ ಐಟಿಐ ಉಳ್ಳಾಲ, ಬ್ರಹ್ಮಶ್ರೀ ನಾರಾಯಣ ಗುರು ಐಟಿಐ ಕಾಟಿಪಳ್ಳ, ಎ.ಜಿ. ಸೋನ್ಸ್‌ ಐಟಿಐ ಮೂಡಬಿದಿರೆ, ಎಸ್‌.ಕೆ.ಎಫ್‌ ಐಟಿಐ ಬನ್ನಡ್ಕ ಮೂಡಬಿದಿರೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿಐ ವೇಣೂರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಮಹಿಳಾ) ಐಟಿಐ ಉಜಿರೆ, ಮಹಾಲಿಂಗೇಶ್ವರ ಐಟಿಐ ಪುತ್ತೂರು, ಕೆವಿಜಿ ಐಟಿಐ ಸುಳ್ಯ, ಕೆವಿಜಿ ಐಟಿಐ ಭಾಗಮಂಡಲ, ಬೆಥನಿ ಐಟಿಐ ನೆಲ್ಯಾಡಿ ಪುತ್ತೂರು, ಪರಿವಾರ ಪಂಚಲಿಂಗೇಶ್ವರ ಐಟಿಐ ನಿಂತಿಕಲ್ಲು ಸುಳ್ಯ, ಬಿಎ ಐಟಿಐ ತುಂಬೆ ಬಂಟ್ವಾಳ, ಸರಸ್ವತಿ ಐಟಿಐ ಪುತ್ತೂರು, ಪ್ರಸನ್ನ ಐಟಿಐ ಲಾೖಲ ಬೆಳ್ತಂಗಡಿ, ಶ್ರೀ ದುರ್ಗಾದೇವಿ ಐಟಿಐ ನಿಡ್ಡೋಡಿ ಕಟೀಲು, ನಾಗರಿಕ ಐಟಿಐ ಗುರುವಾಯನಕೆರೆ, ವಿಟ್ಲ ಸುಪ್ರಜಿತ್‌ ಐಟಿಐ ವಿಟ್ಲ, ಓಂ ಎಂಟರ್‌ಟೈನ್‌ಮೆಂಟ್‌ ಫಿಲ್ಮಂ ಆ್ಯಂಡ್‌ ಮೀಡಿಯಾ ಇನ್ಸ್‌ಟಿಟ್ಯೂಟ್‌ (ಎಸ್‌ಸಿವಿಟಿ) ಮಂಗಳೂರು, ಸೈಂಟ್‌ ಮೇರೀಸ್‌ ಐಟಿಐ ಉಡುಪಿ, ನ್ಯಾಶನಲ್‌ ಐಟಿಐ ಬಾಕೂìರು ಉಡುಪಿ, ರೆವರೆಂಡ್‌ ಫಾದರ್‌ ರಾಬರ್ಟ್‌ ಜೆಡ್‌.ಎಂ. ಡಿಸೋಜ ಐಟಿಐ ನಾಡ ಕುಂದಾಪುರ, ಹನುಮಾನ್‌ ಐಟಿಐ ಕಾರ್ಕಳ, ಟ್ರಿನಿಟಿ ಐಟಿಐ ಉದ್ಯಾವರ ಉಡುಪಿ, ಶ್ರೀ ಆತ್ಮಾನಂದ ಸರಸ್ವತಿ ಐಟಿಐ ಸಾಯಿಬ್ರಕಟ್ಟೆ, ಎಸ್‌ಡಿಎಂ ಮಂಗಳಜ್ಯೋತಿ ಐಟಿಐ ವಾಮಂಜೂರು, ಒಡಿಯೂರು ಶ್ರೀ ಗುರುದೇವ ಐಟಿಐ ಕನ್ಯಾನ ಬಂಟ್ವಾಳ, ಯೋಗಲೋಕ ಐಟಿಐ ಅಂಪಾರು ಕುಂದಾಪುರ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿಐ ಸಂಸ್ಥೆ.

ಬಡತನ ಮತ್ತು ನಿರುದ್ಯೋಗ ನಿರ್ಮೂಲನಾ ಕಾರ್ಯದಲ್ಲಿ ದೇಶದಲ್ಲಿ ಹೆಚ್ಚು ಯಶಸ್ವಿಯಾಗಿರುವುದು ಮತ್ತು ಕೈಗೆಟಕುವ ದರದಲ್ಲಿ ತಾಂತ್ರಿಕ ಶಿಕ್ಷಣ ದೊರಕುತ್ತಿರುವುದು ಕೈಗಾರಿಕಾ ತರಬೇತಿ ಸಂಸ್ಥೆಗಳಿಂದ. ಈ ಶಿಕ್ಷಣ ಸಂಸ್ಥೆಗಳು ರಾಜ್ಯ ಸರಕಾರದ ಉದ್ಯೋಗ ಮತ್ತು ತರಬೇತಿ ಇಲಾಖೆ ಹಾಗೂ ಕೇಂದ್ರ ಸರಕಾರದ ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್‌ನ ಸಂಯೋಜನೆಗೊಳಪಟ್ಟಿರುತ್ತದೆ. ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್‌ನ ಶಾಶ್ವತ ಸಂಯೋಜನೆಗೊಳಪಟ್ಟ (ಎನ್‌ಸಿವಿಟಿ) ವೃತ್ತಿ ವಿಭಾಗಗಳಲ್ಲಿ ಹಾಗೂ ರಾಜ್ಯ ಸರಕಾರದ ಮಾನ್ಯತೆ (ಎಸ್‌ಸಿವಿಟಿ) ಪಡೆದ ವೃತ್ತಿ ವಿಭಾಗಗಳಲ್ಲಿ ಎರಡು ಅಥವಾ ಒಂದು ವರ್ಷದ ಅವಧಿಯ ತರಬೇತಿ ನೀಡುತ್ತಿದ್ದು, ತರಬೇತಿ ಅಂತ್ಯದಲ್ಲಿ ವಿದ್ಯಾರ್ಥಿಗಳು ಅಖೀಲ ಭಾರತ ವೃತ್ತಿ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಎನ್‌ಸಿವಿಟಿ ಮಾನ್ಯತೆ ಪಡೆದ ವೃತ್ತಿ ವಿಭಾಗದಲ್ಲಿ ತರಬೇತಿ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕೇಂದ್ರ ಸರಕಾರದಿಂದ ರಾಷ್ಟ್ರೀಯ ವೃತ್ತಿ ಪ್ರಮಾಣಪತ್ರ ಹಾಗೂ ಎಸ್‌ಸಿವಿಟಿ ಮಾನ್ಯತೆ ಪಡೆದ ವೃತ್ತಿ ವಿಭಾಗದಲ್ಲಿ ತರಬೇತಿ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ರಾಜ್ಯ ವೃತ್ತಿ ಪ್ರಮಾಣಪತ್ರ ನೀಡಲಾಗುತ್ತಿದೆ. ಪೋಷಕರು ಮತ್ತು ವಿದ್ಯಾರ್ಥಿಗಳು ಪ್ರವೇಶ ಸಂದರ್ಭ ಇದನ್ನು ಗಮನಿಸಿಕೊಂಡು ಪ್ರವೇಶ ಪಡೆದುಕೊಳ್ಳಬೇಕು ಎಂದು ಸಂಘದ ಅಧ್ಯಕ್ಷರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಐಟಿಐಗಳಿಗಿರುವ ಬೇಡಿಕೆ ಮನಗಂಡು ಮಾನ್ಯತೆಯಿಲ್ಲದ ಕೆಲವು ಖಾಸಗಿ ಸಂಸ್ಥೆಗಳು ಕಾರ್ಯಾಚರಿಸುತ್ತಿದ್ದು, ವಿದ್ಯಾರ್ಥಿಗಳನ್ನು ವಂಚಿಸುತ್ತಿವೆ. ಮೂರು ಅಥವಾ ಆರು ತಿಂಗಳಿನ ಮತ್ತು ಇನ್ನಿತರ ಅಲ್ಪಾವಧಿಗೆ ಕೇಂದ್ರ ಸರಕಾರದ (ಎಂಇಎಸ್‌) ಯೋಜನೆಯಡಿ ತರಬೇತಿ ನೀಡಿ ಐಟಿಐ ತರಬೇತಿ ನೀಡಲಾಗುವುದು ಎಂದು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುವ ಕೆಲಸದಲ್ಲಿ ಅಂತಹ ಸಂಸ್ಥೆಗಳು ನಿರತವಾಗಿವೆ. ವಿದ್ಯಾರ್ಥಿಗಳು ಇಂತಹ ವಿಷಯದಲ್ಲಿ ಜಾಗೃತರಾಗಿರಬೇಕು ಎಂದು ಪ್ರಕಟನೆ ವಿವರಿಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com