ತರಕಾರಿ ಕೃಷಿ ಮಾಹಿತಿ ಕಾರ್ಯಕ್ರಮ

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ವತಿಯಿಂದ ತರಕಾರಿ ಬೀಜ ವಿತರಣೆ  ಹಾಗೂ ತರಕಾರಿ ಕೃಷಿ ಮಾಹಿತಿ ಕಾರ್ಯಕ್ರಮ.

ಉಪ್ಪುಂದ: ಇಲ್ಲಿನ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ., ವತಿಯಿಂದ  ಸಂಘದ ನವೋದಯ ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ಉಪ್ಪುಂದ ಶಂಕರ ಕಲಾಮಂದಿರದಲ್ಲಿ ಉಚಿತ ತರಕಾರಿ ಬೀಜ ವಿತರಣೆ ಹಾಗೂ ತರಕಾರಿ ಕೃಷಿ ಮಾಹಿತಿ ಕಾರ್ಯಕ್ರಮ ಜರಗಿತು. 
    ಸಂಘದ ಅಧ್ಯಕ್ಷರಾದ  ಎಸ್. ಪ್ರಕಾಶ್ಚಂದ್ರ ಶೆಟ್ಟಿ  ದೀಪ ಬೆಳಗಿಸಿ, ಸ್ವ-ಸಹಾಯ ಗುಂಪಿನ ಸದಸ್ಯರಿಗೆ ವಿವಿಧ ಬಗೆಯ ತರಕಾರಿ ಬೀಜ ನೀಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಲಾಭದಾಯಕವಾಗುವ ನಿಟ್ಟಿನಲ್ಲಿ ಯೋಚಿಸಿ ಕಾಲಕಾಲಕ್ಕೆ ಕೃಷಿಯ ಬಗ್ಗೆ ಕಾಳಜಿ ವಹಿಸಿದಲ್ಲಿ ಖಂಡಿತ ಯಶಸ್ಸುಗಳಿಸ ಬಹುದು. ಕೃಷಿ ಒಂದು ಜೀವನ ಪದ್ದತಿಯಾಗಿದ್ದು ಲಾಭ ನಷ್ಟವನ್ನು ಲೆಕ್ಕಿಸದೆ ಹೊಸ ಹೊಸ ಮಾದರಿಯ ವಿಧಾನಗಳನ್ನು ಅನುಸರಿಸಿಕೊಳ್ಳುವಲ್ಲಿ ಯಶಸ್ವಿಯಾಗಬೇಕು ಎಂದರು.
     ಸಂಪನ್ಮೂಲ ವ್ಯಕ್ತಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಸಹ ಪ್ರಾಧ್ಯಾಪಕ ಧನಂಜಯ ಸಣ್ಣ ಹಾಗೂ ಚಿಕ್ಕ ರೈತರಿಗೆ ಸರಿಹೊಂದುವ ಸಮಗ್ರ ಕೃಷಿ ಪದ್ದತಿ ಕ್ಷೇತ್ರ, ತರಕಾರಿ ಬೆಳೆಗಳ ಮಾದರಿ, ಸಾವಯವ ಕ್ಷೇತ್ರದ ಬಗ್ಗೆ ಮಾಹಿತಿ ಹಾಗೂ ಗ್ರಾಮೀಣ ಪ್ರದೇಶದ ರೈತ ಮಹಿಳೆಯರು ಮನೆಗೊಂದು ತೋಟ ಮಾಡುವಂತಾಗಲಿ ಮತ್ತು  ಇಲಾಖೆಯಿಂದ ಸಿಗುವ ಸವಲತ್ತುಗಳನ್ನು ಪಡೆಯಲು ಮುಂದಾದಲ್ಲಿ ತನ್ಮೂಲಕ ಇಂದಿನ ತರಬೇತಿ ಕಾರ್ಯಕ್ರಮವು ಫಲಪ್ರದವಾಗುವುದು ಎಂದು ಆಶಯ ವ್ಯಕ್ತಪಡಿಸಿದರು. ನಿವೃತ್ತ ಕೃಷಿ ಅಧಿಕಾರಿ ಕುಛೇಲಯ್ಯ ತರಕಾರಿ ಕೃಷಿ ಹಾಗೂ ಮಾರುಕಟ್ಟೆಯ ಬಗ್ಗೆ ರೋಗ ನಿರೋಧಕಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಗುರುರಾಜ ಹೆಬ್ಬಾರ್ ಹಾಗೂ ಬಳಗ ಸೇರಿಸಿ ಬಂದಿರುವಂತಹ ಸ್ವ-ಸಹಾಯ ಗುಂಪಿನ ಸದಸ್ಯರು ಉಪಸ್ಥಿತರಿದ್ದರು.
     ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಮಮತಾ ವಿ. ಮಯ್ಯ ಸ್ವಾಗತಿಸಿದರು. ವಸೂಲಾತಿ ವ್ಯವಸ್ಥಾಪಕ ಹಾವಳಿ ಬಿಲ್ಲವ ಕಾರ್ಯಕ್ರಮವನ್ನು ನಿರೂಪಿಸಿದರು. ವ್ಯವಸ್ಥಾಪಕ ಸತೀಶ ಪೈ ವಂದಿಸಿದರು. ಸ್ವ-ಸಹಾಯ ಸಂಘದ ಪ್ರೇರಕರಾದ ಬಾಬು ಪೂಜಾರಿ, ಗೀತಾ ಹಾಗೂ ಸಂಘದ ಸಿಬ್ಬಂದಿ ವರ್ಗದವರು ಸಹಕರಿಸಿದರು.


Kambadakone Raitara seva sanga hosted a program about Vegetable growing Information in Uppunda
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com