ಖ.ರೈ.ಸೇ.ಸ. ಬ್ಯಾಂಕ್: ಮಾಹಿತಿ ಕಾರ್ಯಗಾರ


ಉಪ್ಪುಂದ: ಇಲ್ಲಿನ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ., ರೈತ ಶಕ್ತಿ, ರೈತ ಸೇವಾ ಕೂಟ ಉಪ್ಪುಂದ, ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಇಲಾಖೆ ಉಡುಪಿ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಇವರ ಜಂಟಿ ಆಶ್ರಯದಲ್ಲಿ ಖಂಬದಕೋಣೆ ಶಾಖೆಯ ರೈತ ಸಿರಿ ಸಭಾಭವನದಲ್ಲಿ ತೋಟಗಾರಿಕೆ ಹಾಗೂ ಭತ್ತದ ಬೆಳೆಗಳ ಬಗ್ಗೆ ಮತ್ತು ಬೋರ್ಡೋದ್ರಾವಣ ತಯಾರಿ ಹಾಗೂ ಇಲಾಖೆಗಳಿಂದ ಸಿಗುವ ಸೌಲಭ್ಯಗಳ ಮಾಹಿತಿ ಕಾರ್ಯಗಾರ ಜರುಗಿತು. 
        ಕಾರ್ಯಗಾರದ ಉದ್ಘಾಟನೆಯನ್ನು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ  ಎಸ್. ಪ್ರಕಾಶ್ಚಂದ್ರ ಶೆಟ್ಟಿ ಉದ್ಘಾಟಿಸಿ ಮಾತನಾಡಿ ಕೃಷಿ ಕೂಲಿ ಕಾರ್ಮಿಕರ ಅಭಾವದ ಈ ದಿನಗಳಲ್ಲಿ ಕಡಿಮೆ ವೆಚ್ಚದ ಅಧಿಕ ಇಳುವರಿಗಳ ಬಗ್ಗೆ ಅಧ್ಯಯನ ನಡೆಸಿ ರೈತರಿಗೆ ಮಾಹಿತಿ ನೀಡಬೇಕಾದ ಅವಶ್ಯಕತೆ ಇದ್ದು ಇಂತಹ ಮಾಹಿತಿ ಕಾರ್ಯಗಾರದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವ ಅಗತ್ಯತೆ ಇದೆ ಎಂದು ರೈತರಿಗೆ ಕಿವಿಮಾತು ಹೇಳಿದರು.
       ಸಂಪನ್ಮೂಲ ವ್ಯಕ್ತಿಗಳಾದ ಉಡುಪಿ  ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಸತೀಶ ಬಿ.ಪಿ. ತೋಟಗಾರಿಕೆ ಬೆಳೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರದ ಕಾರ್ಯಕ್ರಮ ಸಂಯೋಜಕಿ ಡಾ. ಜಯಲಕ್ಷ್ಮೀ ನಾರಾಯಣ ಹೆಗಡೆ  ತೋಟಗಾರಿಕೆ ಬೆಳೆಗಳ ನಿರ್ವಹಣೆ ಬಗ್ಗೆ ಸೂಕ್ತ ಮಾಹಿತಿ ನೀಡಿ ಅಡಿಕೆ ಕೊಳೆ ರೋಗಕ್ಕೆ ಉಪಯೋಗಿಸುವ ಬೋರ್ಡೊದ್ರಾವಣ ತಯಾರಿಯ ಪ್ರಾತ್ಯಕ್ಷಿಕೆ ತೋರಿಸಿದರು. 
     ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರದ ವಿಷಯ ತಜ್ಞ  ಚೈತನ್ಯ ಎಚ್.ಎಸ್. ಉತ್ತಮ ಬೀಜ, ಹಟ್ಟಿಗೊಬ್ಬರ ಸಮತೋಲನ ಪೋಶಕಾಂಶಗಳ ಬಳಕೆ, ಕಳೆ ನಿಯಂತ್ರಣ, ಸರಳ ಯಾಂತ್ರಿಕೃತ ಬೇಸಾಯದ ಕುರಿತು ಮಾಹಿತಿ ನೀಡಿದರು. ಕುಂದಾಪುರ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ  ರಾಮದಾಸ ರೈ ಮಾತನಾಡಿ ಕೃಷಿಯಲ್ಲಿ ಸಮಗ್ರ ಪೋಶಕಾಂಶಗಳ ನಿರ್ವಹಣೆ, ಬೀಜೋಪಚಾರ, ಜೈವಿಕ ಕೃಷಿ, ಕಳೆ ನಾಶಕಗಳ ಕುರಿತು ಮಾಹಿತಿ ನೀಡಿದರು. 
       ಕಾರ್ಯಾಗಾರದಲ್ಲಿ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಮೋಹನ ಪೂಜಾರಿ, ಕೊರಗ ದೇವಾಡಿಗ, ಗುರುರಾಜ ಹೆಬ್ಬಾರ್ ಹಾಗೂ  ರೈತ ಸದಸ್ಯರು ಉಪಸ್ಥಿತರಿದ್ದರು.
       ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ  ಮಮತಾ ವಿ. ಮಯ್ಯ ಸ್ವಾಗತಿಸಿ, ವಸೂಲಾತಿ ವ್ಯವಸ್ಥಾಪಕ ಹಾವಳಿ ಬಿಲ್ಲವ ಕಾರ್ಯಕ್ರಮವನ್ನು ನಿರೂಪಿಸಿದರು. ವ್ಯವಸ್ಥಾಪಕ ಸತೀಶ ಪೈ ವಂದಿಸಿದರು. ಸಹೋದ್ಯೋಗಿ ನವೀನ ಕೊಡೇರಿ ಪ್ರಾರ್ಥನೆಗೈದರೇ, ಖಂಬದಕೋಣೆ ಶಾಖಾ ವ್ಯವಸ್ಥಾಪಕ ಸುಬ್ಬಣ್ಣ ಗಾಣಿಗ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com