ಶತಮಾನದ ಕವಿ ಕಯ್ಯಾರರಿಗೆ ಶತ ನಮನ ಪೆರಡಾಲದಲ್ಲಿ ಸಂಭ್ರಮದ ಕ್ಷಣಗಳು

    ಅತ್ತ ಅವರು ಮಗುವಿನಂತೆ ವನೀತ ಭಾವದಿಂದ ವೇದಿಕೆಯಲ್ಲಿ ವೀಲ್ ಚೇರ್‌ನಲ್ಲಿ ಸನ್ಮಾನ ಸ್ವೀಕರಿಸುವಾಗ ಕುಳಿತಿದ್ದರೆ ಜನ ಅವರ ಬದುಕಿನ ಸಿದ್ಧಿ ಸಾಧನೆಯೊಂದಿಗೆ ತುಂಬು ಜೀವನ ಸಾಗಿಸಿದ ಬಗೆಗೆ ಮೆಚ್ಚುಗೆಯ ನುಡಿಗಳೊಂದಿಗೆ ಕಣ್ತಂಬಿ ಕೊಂಡು ಹೃದಯ ತುಂಬಿಕೊಂಡಿದ್ದರು.
    ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಮತ್ತು ನಾಡೋಜ ಡಾ| ಕಯ್ಯಾರ ಕಿಞ್ಞಣ್ಣ ರೈ ಜನ್ಮ ಶತ‌ಮಾನೋತ್ಸವ ಪೌರ ಸಮಿತಿ ಬದಿಯಡ್ಕ ಇದರ ಸಂಯುಕ್ತ ಆಶ್ರಯದಲ್ಲಿ ಪೆರಡಾಲದ ಕವಿತಾ ಕುಟೀರದಲ್ಲಿ  ಕನ್ನಡದ ಮಹತ್ವದ ಸಾಹಿತಿ, ಗಡಿನಾಡ ಹೋರಾಟಗಾರ ನಾಡೋಜ ಡಾ| ಕಯ್ಯಾರ ಕಿಞ್ಞಣ್ಣ ರೈ ಜನ್ಮ ಶತಮಾನೋತ್ಸವ ಸಂಭ್ರಮದಿಂದ ಆಚರಿಸಲಾಯಿತು.
     ಕರ್ನಾಟಕ ಸರಕಾರದ ಯುವಜನ ಸೇವೆ - ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್‌ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಕಾಸರಗೋಡು ಶಾಸಕ ಎನ್‌.ಎ. ನೆಲ್ಲಿಕುನ್ನು ಅವರು ಅಧ್ಯಕ್ಷತೆ ವಹಿಸಿದರು. ಕರ್ನಾಟಕ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್‌ ಸೊರಕೆ, ಶಾಸಕ ಪಿ.ಬಿ. ಅಬ್ದುಲ್‌ ರಝಾಕ್‌, ಜಿಲ್ಲಾಧಿಕಾರಿ ಮೊಹಮ್ಮದ್‌ ಸಗೀರ್‌, ಸಾಹಿತಿ ನಾ. ಡಿ'ಸೋಜಾ, ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚಂದ್ರಕಾಂತ ಗುರಪ್ಪ ಬೆಲ್ಲದ ಧಾರವಾಡ, ಚುಟುಕು ಸಾಹಿತ್ಯ ಪರಿಷತ್‌ ಕೇಂದ್ರ ಸಮಿತಿ ಸಂಚಾಲಕ ಡಾ| ಎಂ.ಜಿ.ಆರ್‌. ಅರಸ್‌ ಮೈಸೂರು, ತುಳು ಅಕಾಡೆಮಿ ಅಧ್ಯಕ್ಷೆ ಪ್ರೊ| ಜಾನಕಿ ಬ್ರಹ್ಮಾವರ್‌, ಬೇಳ ಶೋಕಮಾತಾ ಇಗರ್ಜಿಯ ಅತೀ ವಂದನೀಯ ಧರ್ಮಗುರು ವಿನ್ಸೆಂಟ್‌ ಡಿ'ಸೋಜಾ, ಉದಯವಾಣಿಯ ಮಂಗಳೂರು ಬ್ಯೂರೋ ಚೀಫ್‌ ಮನೋಹರ ಪ್ರಸಾದ್‌, ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಬಿಜೆಪಿ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಶ್ರೀಕಾಂತ್‌, ಉಪನ್ಯಾಸಕ ನರೇಂದ್ರ ರೈ ದೇರ್ಲ, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ. ಹನೀಫ್‌, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಬಿ. ಸುಬ್ಬಯ್ಯ ರೈ, ಎಣ್ಮಕಜೆ ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ ಆಯಿಷಾ ಎ.ಎ., ಡಾ| ಚಿನ್ನಪ್ಪ ಗೌಡ, ಸಂಶೋಧಕ ವಾಮನ ನಂದಾವರ, ಕರ್ನಾಟಕ ಕಾವಲು ಪಡೆಯ ಅಧ್ಯಕ್ಷ ಎಂ. ಮೋಹನ್‌ ಕುಮಾರ್‌, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾಸರಗೋಡು ತಾಲೂಕು ಸಂಚಾಲಕಿ ಸಂಧ್ಯಾ ವಿ. ಶೆಟ್ಟಿ, ಮಾಜಿ ಸಚಿವ ಸಿ.ಟಿ. ಅಹಮ್ಮದಾಲಿ ಮೊದಲಾದವರು ಮಾತನಾಡಿದರು.

'ಶತ ಸಂಭ್ರಮ' ಕೃತಿ ಬಿಡುಗಡೆ

ಭುವನ ಪ್ರಸಾದ್‌ ಹೆಗಡೆ ಅವರ ಸಂಪಾದಕತ್ವದ 'ಶತ ಸಂಭ್ರಮ' ಕೃತಿಯನ್ನು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ನಿವೃತ್ತ ಕುಲಪತಿ ಡಾ| ವಿವೇಕ ರೈ ಅವರು ಬಿಡುಗಡೆಗೊಳಿಸಿದರು.

ಬದಿಯಡ್ಕ ಪಂಚಾಯತ್‌ ವತಿಯಿಂದ 'ಮೈತ್ರಿ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಗೌರವಿಸಲಾಯಿತು. ಇದೇ ಸಂದರ್ಭ ವಿವಿಧ ಸಂಘ ಸಂಸ್ಥೆಗಳಿಂದ ಗೌರವಿಸಲಾಯಿತು. ಬಾಲ ಪ್ರತಿಭೆ ಸನ್ನಿಧಿ ಟಿ.ರೈ ಹಾಡಿರುವ 'ಎಸಳ್‌' ಎಂಬ ಕಯ್ನಾರರ ಕೃತಿಗಳ ಹಾಡುಗಳ ಸಿಡಿ ಬಿಡುಗಡೆಗೊಳಿಸಲಾಯಿತು. ಕಯ್ನಾರರ ಕುರಿತು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹ ಹಾಗೂ ವಿವಿಧ ಪ್ರಶಸ್ತಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು.ರಾಧಾಕೃಷ್ಣ ಕೆ. ಉಳಿಯತ್ತಡ್ಕ ಹಾಗೂ ಜಗದೀಶ್‌ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಪೌರ ಸಮಿತಿ ಅಧ್ಯಕ್ಷ ಮಾಹೀನ್‌ ಕೇಳ್ಳೋಟ್‌ ಆಶಯ ಭಾಷಣ, ಉಪಾಧ್ಯಕ್ಷ ಮಧುಕರ ರೈ ಕೊರೆಕ್ಕಾನ ಸ್ವಾಗತಿಸಿದರು. ನವಜೀವನ ಹೈಸ್ಕೂಲ್‌ನ 100 ವಿದ್ಯಾರ್ಥಿಗಳು 'ಕಯ್ನಾರರ ಐಕ್ಯಗಾನ ಹಾಡಿದರು. ಭುವನೇಶ್ವರ ಹಗೆಡೆ ವಂದಿಸಿದರು.

ವಿಶೇಷಗಳು:
# ಕರ್ನಾಟಕ ಮತ್ತು ಕೇರಳ ಸರ್ಕಾರದ ಜನಪ್ರತಿನಿಧಿಗಳ ಸಮಾಗಮ.
# ಮಳಯಾಳ, ಕನ್ನಡ ಮತ್ತು ತುಳು ಭಾಷೆಗಳಲ್ಲಿ ಕಯ್ಯಾರರ ಚಿತ್ರವನ್ನು ಕಟ್ಟಿ ಕೊಡಲು ಅತಿಥಿಗಳು ಪ್ರಯತ್ನ ಪಟ್ಟರು.
# ಮಾಹಿನ್ ಕೇಳೊಟ್ ಅವರು ರೈ ಅವರನ್ನು ಕನ್ನಡದ ಕುಲಾಧಿಪತಿ ಎಂದು ಪ್ರಶಂಸಿಸಿದರು.
# ಹೆಸರು ಚಿಕ್ಕಣ್ಣ ಆದರೆ ಅವರು ನಮ್ಮೆಲ್ಲರ ದೊಡ್ಡಣ್ಣ ಎಲ್ಲಾ ರೀತಿಯಲ್ಲೂ ಎಂದು ಸೊರಕೆ ಅವರು ಬಣ್ಣಿಸಿದರು.
# ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರು ಚೆಂಡೆ ಮದ್ದಳೆಗಳೊಂದಿಗೆ ಕಯ್ಯಾರರ ಮೆಚ್ಚಿನ ಶಿಷ್ಯ ರಾಧಾಕೃಷ್ಣ ಉಳಿಯತಡ್ಕ ಅವರ ಗೀತೆಯನ್ನು ಹಾಡಿ ಯಕ್ಷಾಭಿನಂದನೆ ಮಾಡಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com