ಕಲಿಕೆ ಎನ್ನುವುದು ಪಠ್ಯಕ್ರಮಕ್ಕೆ ಸೀಮಿತವಲ್ಲ: ಪ್ರೊ. ಚಂದ್ರಶೇಖರ ದೋಮ

ಕುಂದಾಪುರ: ಕಲಿಕೆ ಎನ್ನುವುದು ಕೇವಲ ಪಠ್ಯಕ್ರಮಕ್ಕೆ ಸೀಮಿತವಲ್ಲ ಎಂದು ಬ್ಯಾರೀಸ್‌ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕರಾದ ಪ್ರೊ| ಚಂದ್ರಶೇಖರ ದೋಮ ಹೇಳಿದರು .

ಅವರು ಬ್ಯಾರೀಸ್‌ ಸಂಯುಕ್ತ ಪದವಿ ಪೂರ್ವ ಕಾಲೆಜಿನಲ್ಲಿ ನಡೆದ ಪುನಶ್ವೇತನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

ವಿದ್ಯಾರ್ಥಿಗಳು ತಮ್ಮನ್ನು ತಾವು ಸ್ವ ವಿಮರ್ಶೆ ಮಾಡಿಕೊಳ್ಳಬೇಕು. ಕನಸು ನನಸಾಗಲು ಪ್ರಯತ್ನ ಪಡಬೇಕು. ನಮ್ಮಲ್ಲಿ ಕಂಡು ಬಂದ ಬಲಹೀನತೆಯನ್ನು ಗುರುತಿಸಬೇಕು. ಶ್ರಮ , ಶ್ರದ್ಧೆ ಇರಬೇಕು. ಜೀವನಕ್ಕೆ ಪಠ್ಯಕ್ರಮ ಇಲ್ಲ , ನಮ್ಮ ಜೀವನದ ಪಠ್ಯಕ್ರಮವನ್ನು ನಾವೇ ಕಟ್ಟಿಕೊಳ್ಳಬೇಕು. ಸಾಂಸ್ಕೃತಿಕವಾಗಿ ,ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬ್ಯಾರೀಸ್‌ ಮಹಾವಿದ್ಯಾಲಯದ ಪ್ರಾಂಶುಪಾಲ ಸಿದ್ದಪ್ಪರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಪ. ಪೂ ಕಾಲೇಜಿನ ಪ್ರಾಂಶುಪಾಲ ಶಮೀರ್‌ ಉಪಸ್ಥಿತರಿದ್ದರು.

ವಿಜ್ಞಾನ ಉಪನ್ಯಾಸಕಿ ವರ್ಷಾ ಸ್ವಾಗತಿಸಿ, ಕನ್ನಡ ಉಪನ್ಯಾಸಕ ಡಾ| ಕೃಷ್ಣರಾಜ ಕರಬ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯ ಉಪನ್ಯಾಸಕಿ ಪೂರ್ಣಿಮಾ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com