ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯ

ಕುಂದಾಪುರ: ಪರವಾನಿಗೆ ಪತ್ರಗಳನ್ನು ಹೊಂದಿ ಕೊಲ್ಲೂರಿನ ಧರ್ಮ ಪೀಠದ ಗೋ ಶಾಲೆಯಿಂದ ಕೇರಳದ ಪಾಲಕ್ಕಾಡಿನಲ್ಲಿರುವ ಗೋ ಶಾಲೆಗೆ ದನಗಳನ್ನು ಕೊಂಡೊಯ್ಯುತ್ತಿದ್ದವರನ್ನು ಬುಧವಾರ ರಾತ್ರಿ ಕೋಟೇಶ್ವರದಲ್ಲಿ ಅಡ್ಡಗಟ್ಟಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ದುಷರ್ಮಿಗಳನ್ನು ಶೀಘ್ರ ಬಂಧಿಸಬೇಕು ಎಂದು ಒತ್ತಾಯಿಸಿ ಕುಂದಾಪುರ ಬಾರತ ಕಮ್ಯುನಿಸ್ಟ್‌ ಪಕ್ಷ (ಮಾಕ್ಸ್‌ವಾದಿ) ಹಾಗೂ ಡಿವೈಎಫ್‌ಐ ಕುಂದಾಪುರ ತಾಲೂಕು ಸಮಿತಿ ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.

ಸಿಪಿಐ(ಎಂ) ಪ್ರಮುಖರಿಂದ ಸ್ವಾಮೀಜಿಯ ಯೋಗಕ್ಷೇಮ ವಿಚಾರಣೆ
ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ(ಎಂ) ಮುಖಂಡ ನರಸಿಂಹ ಎಚ್‌. ಅವರು ಸ್ವಾಮೀಜಿ ಸಹಿತ ಮೂವರ ಮೇಲೆ ನಡೆಸಿದ ಹಲ್ಲೆ ಖಂಡನೀಯ. ಕಾನೂನು ಕೈಗೆತ್ತಿ ಕೊಂಡು ಹಲ್ಲೆ ನಡೆಸಿದ ದುಷ್ಕಿರ್ಮಗಳನ್ನು ಬಂಧಿಸಬೇಕು. ಕಾನೂನು ಕಾಪಾಡಲಾರದ ಗೃಹ ಸಚಿವರು ರಾಜೀನಾಮೆ ನೀಡಬೇಕು ಘಟನೆಗೆ ಕಾರಣರಾದವರ ವಿರುದ್ದ ಪೊಲೀಸ್‌ ಇಲಾಖೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಈ ಪ್ರತಿಭಟನೆಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ಶಂಕರ್‌ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಮುಖಂಡರುಗಳಾದ ಮಹಾಬಲ ವಡೇರಹೋಬಳಿ, ವೆಂಕಟೇಶ ಕೋಣಿ, ಸುರೇಶ್‌ ಕಲ್ಲಾಗರ ಮೊದಲಾದವರು ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com