ಕುಂದಾಪುರದ ಅಭಿವೃದ್ಧಿಗೆ ಪೂರಕ ರೈಲುಯಾನ: ರೈಲ್ವೆ ಸಚಿವರಿಗೆ ಮನವಿ

ಕುಂದಾಪುರ: ಕರಾವಳಿ ಅದರಲ್ಲೂ ಮುಖ್ಯವಾಗಿ ಕುಂದಾಪುರದ ಅಭಿವೃದ್ಧಿಗೆ ಪೂರಕವಾದ ಹಲವು ರೈಲು ಯಾನದ ಅವಶ್ಯಕತೆಗಳನ್ನು ಮನಗಂಡು ಈ ಭಾಗಕ್ಕೆ ಪೂರಕವಾದ ಯೋಜನೆಗಳನ್ನು ಮುಂದಿನ ಬಜೆಟ್‌ನಲ್ಲಿ ಮಂಡಿಸಬೇಕು ಎನ್ನುವ ಬೇಡಿಕೆಯೊಂದರ ಮನವಿಯನ್ನು ಕುಂದಾಪುರ ವಿಧಾನಸಬಾ ಕ್ಷೇತ್ರದ ಬಿಜೆಪಿ ಕ್ಷೇತ್ರಾಧ್ಯಕ್ಷ ಕೇಂದ್ರ ರೈಲ್ವೇ ಸಚಿವ ಸದಾನಂದ ಗೌಡ ಅವರಿಗೆ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಮೂಲಕ ಸಲ್ಲಿಸಿದೆ.

ಮನವಿಯಲ್ಲಿ ಮುಖ್ಯವಾಗಿ ವಾಸ್ಕೋ - ಮಂಗಳೂರು ನಡುವೆ ಹೊಸ ಪ್ಯಾಸೆಂಜರ್‌ ಎಕ್ಸಪ್ರಸ್‌ ರೈಲು, ಈಗಿರುವ ಭಟ್ಕಲ್‌ ತೂಕೂರು ಡಿಎಂಯು ರೈಲನ್ನು ಮಡಗಾಂ ತನಕ ವಿಸ್ತರಣೆ ಮಾಡುವ ಬಗ್ಗೆ, ಯಶವಂತಪುರ - ಕಾರವಾರ ರೈಲನ್ನು ಪ್ರತಿದಿನ ಓಡಿಸುವುದು, ಮಂಗಳೂರು - ಮೀರಜ್‌ ಮಹಾಲಕ್ಷ್ಮೀ ಎಕ್ಸಪ್ರಸ್‌ನ್ನು ಹಾಸನ ಅರಸೀಕೆರೆ ಮೂಲಕ ಓಡಿಸುವುದು ಹಾಗೂ ಸುಬ್ರಹ್ಮಣ್ಯ - ಮಂಗಳೂರು - ಕುಂದಾಪುರ - ಮುಡೇìಶ್ವರ - ಗೋಕರ್ಣ - ಮಡಗಾಂ - ಲೋಂಡಾ ಹುಬ್ಬಳ್ಳಿ ಮಾರ್ಗದಲ್ಲಿ ಹೊಸ ರೈಲನ್ನು ಓಡಿಸುವ ಕುರಿತು ಬಜೆಟ್‌ನಲ್ಲಿ ಪ್ರಾಶಸ್ತ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದೆ.

ಇದಲ್ಲದೇ ಕುಂದಾಪುರ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸುವುದರೊಂದಿಗೆ ಬೈಂದೂರಿನಿಂದ ಮಂಗಳೂರು ತನಕದ ರೈಲು ಮಾರ್ಗವನ್ನು ದ್ವಿಪಥಗೊಳಿಸಿ ವಿದ್ಯುದ್ದಿಕರಣಗೊಳಿಸಬೇಕು, ಮಂಗಳೂರು ಕೇಂದ್ರ ನಿಲ್ದಾಣದಲ್ಲಿ ಹೆಚ್ಚುವರಿ ಪ್ಲಾಟ್‌ಪಾರಂ ನಿರ್ಮಿಸುವುದರೊಂದಿಗೆ ಹೆಚ್ಚು ರೈಲುಗಳನ್ನು ನಿಲುಗಡೆಗೊಳಿಸುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com