ಐತಿಹಾಸಿಕ ಸತ್ಯವಿದ್ದರೆ ಅದು ಉಡುಪಿಯಲ್ಲಿ ಮಾತ್ರ: ಕೆ.ಎ. ದಯಾನಂದ

ಕೋಟೇಶ್ವರ: ಕನಕದಾಸರಂತಹ ಸಾಮಾನ್ಯ ವ್ಯಕ್ತಿಯ ಐತಿಹಾಸಿಕ ಸತ್ಯವಿದ್ದರೆ ಅದು ಉಡುಪಿಯಲ್ಲಿ ಮಾತ್ರ. ಕನಕ ಭಕ್ತಿಯಿಂದ ಶ್ರೀ ಕೃಷ್ಣ ಭಗವಂತನ ಶಕ್ತಿ ಹೆಚ್ಚಿದೆ. ಆಸ್ತಿಕ-ನಾಸ್ತಿಕರ ಗೊಂದಲದ ನಡುವೆ ಬಹುಪಾಲು ಮನುಷ್ಯರ ತಮ್ಮ ಬದುಕಿನ ದಾರಿ ಹುಡುಕುತ್ತಾ ವ್ಯವಸ್ಥಗೆ ತಕ್ಕಂತೆ ತಮ್ಮನ್ನು ಬದಲಾಯಿಸಿಕೊಂಡಿದ್ದಾರೆ. ಕನಕದಾಸರ ಜೀವನ ಚರಿತ್ರೆಯ ಬಗ್ಗೆ ವಿವರವಾದ ವಿಶ್ಲೇಷಣೆಗಾಗಿ ಈ ಒಂದು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ನಿರ್ದೇಶಕ ಕೆ.ಎ. ದಯಾನಂದ ಹೇಳಿದರು.

ಅವರು ಬೀಜಾಡಿಯ ಕಡಲ ಕಿನಾರೆಯಲ್ಲಿ ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಬೆಂಗಳೂರು, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, ಜನಪ್ರತಿನಿಧಿ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕನಕ-ಕೃಷ್ಣ : ಕಡಲತಡಿ ಮಾತುಕತೆ ಎಂಬ ಒಂದು ದಿನದ ಸಂವಾದ ಗೋಷ್ಠಿಯನ್ನು ಜೂ.29ರಂದು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ| ಬಂಜೆಗೆರೆ ಜಯಪ್ರಕಾಶ್‌ ಆಗಮಿಸಿದ್ದರು. ರಾ.ಸಂ.ಕ.ಅ. ಮತ್ತು ಸಂ. ಕೇಂದ್ರದ ಸಮನ್ವಯಾಧಿಕಾರಿ ಕಾ.ತ. ಚಿಕ್ಕಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶ ಹಾಗೂ ಕನಕದಾಸರ ಜೀವನಕ್ರಮ, ಕೃಷ್ಣ ವಿವಿಧ ಧಾರೆಗಳ ಬಗ್ಗೆ ಮಾಹಿತಿ ನೀಡಿದರು.

ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಸ್ವಾಗತಿಸಿದರು. ಡಾ| ಕಿಶೋರ್‌ ಕುಮಾರ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com