ಮಕ್ಕಳ ಮಾನಸಿಕ ಒತ್ತಡಕ್ಕೆ ಪೋಷಕರು ಕಾರಣ: ಡಾ.ಅಶೋಕ ಪೈ

ಕುಂದಾಪುರ: ಪೈಪೋಟಿಯ ಈ ಕಾಲಘಟ್ಟದಲ್ಲಿ ಪೋಷಕರು ಮತ್ತು ಶಿಕ್ಷಕರು ಮಕ್ಕಳ ಮಾನಸಿಕ ಒತ್ತಡಕ್ಕೆ ಕಾರಣರಾಗುತ್ತಿದ್ದಾರೆ. ಹೆಚ್ಚಿನ ಅಂಕ ಗಳಿಕೆಗಾಗಿ ಪದೇ ಪದೇ ಮಕ್ಕಳ ಮೇಲೆ ಹೊರೆ ಬೀಳುವಷ್ಟು ಬರೆ ಹಾಕುವುದು ನಡೆಯುತ್ತಿದೆ. ದೈಹಿಕ ಶಕ್ತಿಯಿಂದ ಮಕ್ಕಳನ್ನು ಮತ್ತಷ್ಟು ಮಾನಸಿಕವಾಗಿ ಕುಗ್ಗಿಸುವ ಕೆಲಸಗಳಾಗುತ್ತಿವೆ. ಮಕ್ಕಳನ್ನು ಅವರ ಪಾಡಿಗೆ ಅವರಿಷ್ಟದಂತೆ ಕಲಿಯಲು ಅವಕಾಶ ಮಾಡಿಕೊಡಬೇಕು ಎಂದು ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಕಾರ‌್ಯಪಡೆಯ ನಿರ್ದೇಶಕ ಡಾ.ಕೆ.ಎ. ಆಶೋಕ ಪೈ ಹೇಳಿದರು. 
     ಇಲ್ಲಿನ ರೋಟರಿ ಕಲಾ ಮಂದಿರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ, ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಕಾರ‌್ಯಪಡೆ ಹಾಗೂ ರೋಟರಿ ಕುಂದಾಪುರ ಸಂಯುಕ್ತ ಆಶ್ರಯದಲ್ಲಿ ಹದಿಹರೆಯದ ಮಕ್ಕಳಿಗೆ ಹಮ್ಮಿಕೊಂಡ ಮನ್ವಂತರ ಮಾರ್ಗದರ್ಶನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. 
    ಒಬ್ಬ ವಿದ್ಯಾರ್ಥಿ ತನ್ನ ಶಿಕ್ಷಣಕ್ಕೆ ಸೇರಿದ ದಿನದಿಂದ ದಿನಕ್ಕೆ ಒಂದು ಗಂಟೆ ಅಭ್ಯಾಸ ಮಾಡಿದರೂ, ಸುಮಾರು ಶೇ.75 ಅಂಕವನ್ನು ಗಳಿಸಬಲ್ಲ. ಯಾವುದೇ ಅಡ್ಡಿ ಅತಂಕಗಳಿಲ್ಲದೆ ತಮ್ಮ ಭೌತಿಕ ಮಟ್ಟದಿಂದ ನಿರ್ಮಲವಾಗಿ ಏಕಾಗ್ರತೆಯಿಂದ ಅಭ್ಯಾಸ ಮಾಡಿದ್ದಲ್ಲಿ ಯಾವ ಮಟ್ಟದ ಪರೀಕ್ಷೆಯನ್ನಾದರೂ ಮಕ್ಕಳು ಎದುರಿಸಬಲ್ಲರು ಎಂದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com