ಮರವಂತೆ : ತ್ರಾಸಿ - ಮರವಂತೆ ಕಡಲ ತೀರದಲ್ಲಿ ಕಡಲಬ್ಬರ ಜಾಸ್ತಿಯಾಗಿದ್ದು, ಭಾರಿ ಗಾತ್ರದ ಸಮುದ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ.
ಕಳೆದ ಎರಡು ದಿನಗಳಿಂದ ವ್ಯಾಪಕ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಈ ಪ್ರದೇಶದಲ್ಲಿ ಸಣ್ಣ ಪ್ರಮಾಣದ ಕಡಲ್ಕೊರೆತ ಕಾಣಿಸಿಕೊಂಡಿದೆ.
ತ್ರಾಸಿ ಮರವಂತೆ ಕಡಲ ತೀರದ ವ್ಯಾಪ್ತಿಯಲ್ಲಿ ಕಡಲ್ಕೊರೆತ ತಡೆಯಲು ನಿರ್ಮಿಸಲಾಗಿರುವ ತಡೆಗೋಡೆಯ ಕಲ್ಲುಗಳು ಒಂದೊಂದಾಗಿ ಜಾರಿ ಸಮುದ್ರ ಪಾಲಾಗುತ್ತಿದೆ.
ಒಂದರ ಮೇಲೊಂದು ಭಾರಿ ಅಲೆಗಳು ತಡೆಗೋಡೆಗೆ ಅಪ್ಪಳಿಸುತ್ತಿರುವುದರಿಂದ ಸಮುದ್ರದ ನೀರು ರಾಷ್ಟ್ರೀಯ ಹೆದ್ದಾರಿಯತ್ತ ಚಿಮ್ಮುತ್ತಿದೆ.
0 comments:
Post a Comment