ಮರವಂತೆಯಲ್ಲಿ ಕಡಲ್ಕೊರೆತ

ಮರವಂತೆ: ಮರವಂತೆಯಲ್ಲಿ ಸಮುದ್ರದ ಆರ್ಭಟ ಹೆಚ್ಚಾಗಿದ್ದು ನಿರ್ಮಾಣ ಹಂತದಲ್ಲಿರುವ ಬಹುಕೋಟಿ ರೂಪಾಯಿ ವೆಚ್ಚದ ರಾಜ್ಯದ ಪ್ರಥಮ ಕೇರಳ ಮಾದರಿಯ ಮರವಂತೆ ಹೊರಬಂದರು ಅಪಾಯಕ್ಕೆ ಸಿಲುಕಿದೆ. ಹೊರಬಂದರು ನಿರ್ಮಾಣ ಕಾರ್ಯಕ್ಕಾಗಿ ಕಡಲಿಗೆ ಸುರಿದ ಕಲ್ಲುಗಳು ಕಡಲ ಅಬ್ಬರಕ್ಕೆ ಕೊಚ್ಚಿಹೋಗಿದೆ. 

ಸೋಮವಾರ ಮಧ್ಯರಾತ್ರಿಯಿಂದ ಒಂದೆ ಸವನೆ ರಕ್ಕಸ ಅಲೆಗಳು ಬಂದರಿನ ತಡೆಗೋಡೆಗೆ ಅಪ್ಪಳಿಸಿದ ಹಿನ್ನೆಲೆಯಲ್ಲಿ 100 ಮೀಟರ್ ವ್ಯಾಪ್ತಿಯ ತಡೆಗೋಡೆ ಕುಸಿದಿದೆ. ಅಂದಾಜು 55 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಮರವಂತೆ ಹೊರಬಂದರು ಪ್ರದೇಶದಲ್ಲಿ ಕಡಲು ಪ್ರತಿಕೂಲ ವಾತಾವರಣ ಸೃಷ್ಟಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com