ಬಾರ್ಕೂರು ಮಹಾ ಸಂಸ್ಥಾನ ನಿರ್ಮಾಣ ಮಾಡುವ ಉದ್ದೇಶವಿದೆ: ವಿಶ್ವ ಸಂತೋಷಭಾರತೀ ಸ್ವಾಮೀಜಿ

ಬೈಂದೂರು: ತುಳುವ ಸಂಸ್ಕೃತಿ ವಿಶ್ವದಾದ್ಯಂತ ಪಸರಿಸುವಲ್ಲಿ ತನ್ನದೇ ಆದ ಮಹತ್ವದ ಕೊಡುಗೆ ನೀಡಿರುವ ಬಂಟ ಸಮುದಾಯಕ್ಕೆ ತನ್ನ ಸಂಸ್ಕತಿ, ಸಂಸ್ಕಾರ ಹಾಗೂ ಅಳಿಯಕಟ್ಟು ಕಟ್ಟುಪಾಡನ್ನು ತಿಳಿಹೇಳುವ ಶ್ರದ್ಧಾ ಕೇಂದ್ರದ ಅಗತ್ಯತೆಯಿದೆ. ಈ ಹಿನ್ನೆಲೆಯಲ್ಲಿ ಬಾರ್ಕೂರು ಮಹಾ ಸಂಸ್ಥಾನ ನಿರ್ಮಾಣ ಮಾಡುವ ಉದ್ದೇಶವಿದೆ ಎಂದು ಬಾರ್ಕೂರು ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಡಾ.ವಿದ್ಯಾವಾಚಸ್ಪತಿ ವಿಶ್ವಸಂತೋಷಭಾರತೀ ಸ್ವಾಮೀಜಿ ಹೇಳಿದರು. 

ನಾಗೂರು ಒಡೆಯರ ಮಠ ಶ್ರೀಕೃಷ್ಣ ಲಲಿತಾ ಕಲಾ ಮಂದಿರದಲ್ಲಿ ಬಾರ್ಕೂರು ಮಹಾ ಸಂಸ್ಥಾನದ ಬೈಂದೂರು ಸೌಪರ್ಣಿಕ ಘಟಕದ ವತಿಯಿಂದ ನಡೆದ ಬಾರ್ಕೂರು ಸಂಸ್ಥಾನ ಪರಿಚಯ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. 

ಕರಾವಳಿಯ ಬಂಟ ಸಮುದಾಯಕ್ಕೆ 249 ದೈವಗಳಿದ್ದು, ಈ ಎಲ್ಲ ದೈವಗಳನ್ನು ಈ ಸಂಸ್ಥಾನದಲ್ಲಿ ಪ್ರತಿಷ್ಠಾಪಿಸಿ, ಇಲ್ಲಿ ಪ್ರತೀ ವರ್ಷ 10 ದಿನಗಳ ಕಾಲ ಭೂತರಾಧನೆಯ ಕೋಲ ನಡೆಸುವ ಮೂಲಕ ಬಂಟ ಸಮುದಾಯವನ್ನು ಸಂಘಟಿಸಲಾಗುವುದು ಎಂದು ಅವರು ಹೇಳಿದರು. 

ಬಂಟ ಸಮಾಜ ಎಲ್ಲ ಕ್ಷೇತ್ರಗಳಲ್ಲಿ ಮುಂದುವರಿದಿದ್ದರೂ, ಧಾರ್ಮಿಕವಾಗಿ ಹಿನ್ನೆಡೆ ಕಾಣುತ್ತಿದೆ. ಪ್ರಸ್ತುತ ವಿಶ್ವದಾದ್ಯಂತ 22 ಲಕ್ಷ ಜನಸಂಖ್ಯೆ ಹೊಂದಿರುವ ಬಂಟ ಸಮುದಾಯ ಸಂಘಟಿತರಾಗಬೇಕು ಎಂದವರು ಹೇಳಿದರು. 

ನಾವುಂದ ಬಂಟಯಾನೆ ನಾಡವರ ಉಪ ಸಂಘದ ಅಧ್ಯಕ್ಷ ಜಗದೀಶ ಶೆಟ್ಟಿ ಕುದ್ರಕೋಡು ಅಧ್ಯಕ್ಷತೆ ವಹಿಸಿದ್ದರು. ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೈಂದೂರು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಬಿ. ಜಗನ್ನಾಥ ಶೆಟ್ಟಿ, ನಾವುಂದ ಬಂಟರ ಯಾನೆ ನಾಡವರ ಉಪಸಂಘದ ಗೌರವಾಧ್ಯಕ್ಷ ರಘುರಾಮ ಶೆಟ್ಟಿ, ಉದ್ಯಮಿ ಜಯಶೀಲ ಶೆಟ್ಟಿ, ಕಾಲ್ತೋಡು ಬಂಟರ ಯಾನೆ ನಾಡವರ ಉಪ ಸಂಘದ ಅಧ್ಯಕ್ಷ ವಾದಿರಾಜ ಶೆಟ್ಟಿ, ಆಲೂರು ಬಂಟರಯಾನೆ ನಾಡವರ ಉಪಸಂಘದ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ, ಹೊಸಾಡು ಬಂಟರಯಾನೆ ನಾಡವರ ಉಪಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ, ಶಿರೂರು ಬಂಟರಯಾನೆ ನಾಡವರ ಉಪಸಂಘದ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ, ಕಿರಿಮಂಜೇಶ್ವರ ಗ್ರಾ.ಪಂ. ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com