ಶೇಖರ ಅಜೆಕಾರು ಅವರ "ನಮ್ಮೂರು ಅಜೆಕಾರು" ಬಿಡುಗಡೆ

ಅಜೆಕಾರು: ಊರಿನ ಬಗೆಗೆ ಜನರಿಗೆ ತಿಳುವಳಿಕೆ ತರುವ ಕೃತಿಗಳು ಅಗತ್ಯವಾಗಿದ್ದು ಶೇಖರ ಅಜೆಕಾರು ಅವರ ನಮ್ಮೂರು ಅಜೆಕಾರು ಒಂದು ಮಾದರಿ ಕೃತಿ. ಇನ್ನೂ ಅನೇಕ ಊರುಗಳನ್ನು ಪುಸ್ತಕ ರೂಪದಲ್ಲಿ ಕಟ್ಟುವ ಅವರ ಯತ್ನ ಶುಭಪ್ರದವಾಗಲಿ ಎಂದು ಸಾಮಾಜಿಕ ಕಾರ್ಯಕರ್ತ ಜಾನ್ ಡಿಸೋಜಾ ಗುಂಡಮೆ ಅವರು ಹೇಳಿದರು.
      ಅವರು ಶುಕ್ರವಾರ ಅಜೆಕಾರಿನ ಕೆಮ್ಮಂಜ ಬಸ್ ನಿಲ್ದಾಣದಲ್ಲಿ ಪತ್ರಕರ್ತ ಶೇಖರ ಅಜೆಕಾರು ಅವರ ನಮ್ಮೂರು ಅಜೆಕಾರು ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
       ಸಾಮಾಜಿಕ ಕಾರ್ಯಕರ್ತ ಅಲೆಕ್ಸ್ ಡಿಸೋಜಾ ಅಧ್ಯಕ್ಷತೆ ವಹಿಸಿ ಇಂತಹ ವಿಭಿನ್ನ ಕಾರ್ಯಕ್ರಮಗಳಿಗೆ ಸಮಾಜದ ಪ್ರೋತ್ಸಾಹ ಸಿಗಲಿ ಎಂದು ಹಾರೈಸಿದರು.
     ಅಜೆಕಾರು ಸೆಕ್ರೆಡ್ ಹಾರ್ಟ್ ಚರ್ಚ್ನ ಧರ್ಮಗುರುಗಳಾದ ಲಾರೆನ್ಸ್ ಮಾರ್ಟಿಸ್ ಅವರು ಆಶೀರ್ವಚನಗೈದರು. ವೈದ್ಯರಾದ ಡಾ, ಸಂತೋಷ್ ಕುಮಾರ್, ಅಜೆಕಾರು ಠಾಣಾಧಿಕಾರಿ ಡಿ.ಎನ್.ಕುಮಾರ್, ಯುವ ಉದ್ಯಮಿ ನಜೀರ್ ಶಾ, ವ್ಯಾಪರೋದ್ಯಮಿ ಬಾಲಕೃಷ್ಣ ಹೆಗ್ಡೆ, ಹರಿಶ್ಚಂದ್ರ ಹೆಗ್ಡೆ, ಗ್ರಾಮೋತ್ಸವ ಸಮಿತಿಯ ಶಂಕರ ಆಚಾರ್ಯ, ಗಿರಿಜಾ ಆಚಾರ್ಯ, ಹರೀಶ ಶಿರ್ವ ಮೊದಲಾದವರು ಉಪಸ್ಥಿತರಿದ್ದರು. ಖ್ಯಾತ ಸಾಹಿತಿ ಡಾ.ನಾ, ಮೊಗಸಾಲೆ ಮತ್ತು ಖ್ಯಾತ ಕವಿ ಶ್ರೀನಿವಾಸ ಜೋಕಟ್ಟೆ ಅವರು ಅಜೆಕಾರಿನ ಕುರಿತು ಬರೆದಿದ್ದಾರೆ.
ಲೇಖಕ ಶೇಖರ ಅಜೆಕಾರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.





ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com