ಗೆಲುವಿನೊಂದಿಗೆ ಜವಾಬ್ದಾರಿ, ನಿರೀಕ್ಷೆ ಇದೆ ಶೋಭಾ ಕರಂದ್ಲಾಜೆ

ಬ್ರಹ್ಮಾವರ : ದೇಶದ ರಕ್ಷಣೆ ಹಾಗೂ ಅಭಿವೃದ್ಧಿಗೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು. ಅದಕ್ಕಾಗಿ ಕ್ಷೇತ್ರದಲ್ಲಿ ನಮ್ಮ ಪ್ರತಿನಿಧಿತ್ವ ಬೇಕು ಎನ್ನುವ ದೃಷ್ಟಿಯಿಂದ ನನ್ನನ್ನು ಗೆಲ್ಲಿಸಿದ್ದೀರಿ. ಈ ಗೆಲುವಿನ ಹಿಂದೆ ಪ್ರತಿಯೊಬ್ಬರ ನಿರೀಕ್ಷೆ ಇದೆ, ಅದನ್ನು ಈಡೇರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಅವರು ಬುಧವಾರ ಬ್ರಹ್ಮಾವರದ ಹೊಟೇಲ್‌ ಆಶ್ರಯದಲ್ಲಿ ಉಡುಪಿ ಗ್ರಾಮಾಂತರ ಬಿಜೆಪಿ ಕಾರ್ಯಕರ್ತರ ಮತ್ತು ಮತದಾರರ ಸಮ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಮುಂದಿನ ದಿನಗಳಲ್ಲಿ ಅಡಿಕೆ, ಪಶ್ಚಿಮಘಟ್ಟ, ರಾಷ್ಟ್ರೀಯ ಹೆದ್ದಾರಿ, ರೈಲ್ವೇ, ಮೀನುಗಾರಿಕೆ ಮತ್ತಿತರ ಕ್ಷೇತ್ರಗಳಲ್ಲಿರುವ ಸಮಸ್ಯೆ ಹಾಗೂ ಆತಂಕ ನಿವಾರಿಸಲಾಗುವುದು. ಗೆದ್ದು ಮೈಮರೆಯದೆ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುವೆ ಎಂದರು.

ಮಾಜಿ ಶಾಸಕ ಕೆ. ರಘುಪತಿ ಭಟ್‌ ಪ್ರಾಸ್ತಾವಿಕ ಮಾತನಾಡಿ, ಕೇಂದ್ರ ಸರಕಾರದಿಂದ ಕ್ಷೇತ್ರದಲ್ಲಿ ಆಗುವ ಅಭಿವೃದ್ಧಿ ಕಾರ್ಯಗಳನ್ನು ನೂತನ ಸಂಸದರು ಸಮರ್ಥವಾಗಿ ನಿರ್ವಹಿಸುವ ಭರವಸೆ ಇದೆ. ಇದರ ಜೊತೆಗೆ ಮುಂಬರುವ ಗ್ರಾ.ಪಂ., ತಾ.ಪಂ., ಜಿ.ಪಂ. ಹಾಗೂ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ಅಭಿವೃದ್ಧಿಯ ವೇಗ ಹೆಚ್ಚಿಸಿಕೊಳ್ಳಬೇಕಾಗಿದೆ ಎಂದರು.

ಅತಿಥಿಗಳಾಗಿ ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಬಿಜೆಪಿ ಪ್ರಮುಖರಾದ ಯಶ್‌ಪಾಲ್‌ ಸುವರ್ಣ, ಉಪೇಂದ್ರ ನಾಯಕ್‌, ಶ್ಯಾಮಲಾ ಕುಂದರ್‌, ಗೀತಾಂಜಲಿ ಸುವರ್ಣ, ರಾಘವೇಂದ್ರ ಕಿಣಿ, ಕಿರಣ್‌ ಕುಮಾರ್‌, ನಿಶಾನ್‌ ಬಿ. ರೈ, ಸಂತೋಷ್‌ ಜತ್ತನ್‌, ಸಂಧ್ಯಾ ರಮೇಶ್‌, ಜಯಂತಿ ವಾಸುದೇವ್‌, ನಳಿನಿ ಪ್ರದೀಪ್‌ ರಾವ್‌, ಯತೀಶ್‌ ವಾರಂಬಳ್ಳಿ, ಕಿಟ್ಟಪ್ಪ ಅಮೀನ್‌, ವಿಠಲ್‌ ಮಾಸ್ಟರ್‌ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಕರ್ಜೆ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ಕನ್ನಾರು ಕಮಲಾಕ್ಷ ಹೆಬ್ಟಾರ್‌ ನಿರೂಪಿಸಿದರು. ಸ್ಥಾನೀಯ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು, ಮತದಾರರನ್ನು ಅಭಿನಂದಿಸಲಾಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com