ಹೊಸದಿಲ್ಲಿ: ದೇಶದ ಜನರಿಗೆ ಅತ್ಯಂತ ತ್ವರಿತ ಪಾಸ್ಪೋರ್ಟ್ ಸೇವೆ ಸಿಗುವಂತೆ ಮಾಡಲಾಗುವುದು ಎಂದು ಕೇಂದ್ರ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಹೇಳಿದ್ದಾರೆ.
ವಿದೇಶ ಸಚಿವಾಲಯವು ಜೂ.24 ಅನ್ನು ಪಾಸ್ಪೋರ್ಟ್ ಸೇವಾ ದಿವಸ್ ಎಂದು ಘೋಷಿಸಿದ್ದು ಈ ಪ್ರಯುಕ್ತದ ದಿನಾಚರಣೆಯ ಸಂದರ್ಭದಲ್ಲಿ ಮಾಧ್ಯಮ ಮಂದಿಯನ್ನು ಉದ್ದೇಶಿಸಿ ಮಾತನಾಡಿದ ಸ್ವರಾಜ್ ಅವರು, ಪಾಸ್ಪೋರ್ಟ್ ಸೇವೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಜನರು ಅತ್ಯುತ್ತಮ ಸಲಹೆಗಳನ್ನು ನೀಡಿ ಸಹಕರಿಸಬೇಕು ಎಂದು ಹೇಳಿದರು.
1967ರ ಪಾಸ್ಪೋರ್ಟ್ ಕಾಯಿದೆ ಜಾರಿಗೆ ಬಂದ ಸ್ಮರಣಾರ್ಥವಾಗಿ ಪ್ರತೀ ವರ್ಷ ಜೂ.24ರಂದು ಪಾಸ್ಪೋರ್ಟ್ ಸೇವಾ ದಿವಸ್ ಆಚರಿಸಲಾಗುತ್ತಿದೆ ಎಂದವರು ಹೇಳಿದರು.
0 comments:
Post a Comment