ಉಡುಪಿ: ಉಡುಪಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಉಪಕೇಂದ್ರ ಆರಂಭಿಸಬೇಕು ಎಂಬ ಉಡುಪಿ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳ ಬೇಡಿಕೆ ಬಹುತೇಕ ಈಡೇರಿದಂತಾಗಿದೆ. ಉಡುಪಿಯ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಉಪಕೇಂದ್ರ ತೆರೆಯಲಾಗಿರುವ ಬಗ್ಗೆ ಕಾಲೇಜು ಜೂ. 26ರಂದು ಅಧಿಕೃತವಾಗಿ ಪ್ರಕಟನೆ ಹೊರಡಿಸಿದೆ.
ಅಧಿಕೃತವಾಗಿ ಪತ್ರಿಕಾ ಪ್ರಕಟನೆ ನೀಡಿರುವ ವಿ.ವಿ. ಉಪಕೇಂದ್ರದ ಸಂಪರ್ಕಾಧಿಕಾರಿಯವರು ''ಮಂಗಳೂರು ವಿ.ವಿ. ಉಪಕೇಂದ್ರವನ್ನು ಇತ್ತೀಚೆಗೆ ತೆರೆಯಲಾಗಿದೆ. 2014-15ನೇ ಸಾಲಿನ ಪ್ರವೇಶಕ್ಕಾಗಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿರುವ ಎಲ್ಲ ಸ್ನಾತಕೋತ್ತರ ಕೋರ್ಸುಗಳಿಗೆ ಹಾಗೂ ವಿ.ವಿ.ಯ ಸಂಯೋಜಿತ ಕಾಲೇಜುಗಳಲ್ಲಿ ಸರಕಾರಿ ಕೋಟಾದಡಿ ಮೀಸಲಿರಿಸಿದ ಸೀಟುಗಳಿಗೆ ಅರ್ಜಿ ಫಾರಂ ಲಭ್ಯವಿರುತ್ತದೆ. ಆಸಕ್ತ ಅಭ್ಯರ್ಥಿಗಳು ಮಾಹಿತಿ ಕೇಂದ್ರದಿಂದ ಅರ್ಜಿ ಸ್ವೀಕರಿಸಬಹುದು. ಕೊನೆಯ ದಿನಾಂಕ, ಪ್ರವೇಶ ಪರೀಕ್ಷೆ ಹಾಗೂ ಇನ್ನಿತರ ಮಾಹಿತಿಗಳಿಗಾಗಿ ದೂರವಾಣಿ ಸಂಖ್ಯೆ 0820-2583275ನ್ನು ಅಥವಾ ವಿ.ವಿ.ಯ ವೆಬ್ಸೈಟ್ www.mangaloreuniversity.ac.in
0 comments:
Post a Comment