ಗಂಡನನ್ನೇ ಕೊಂದು ಬೇಯಿಸಿದ ಪತ್ನಿ

ಲಾಂಗ್ವಿ: ಗಂಡ ತನ್ನ ಪತ್ನಿಯನ್ನು ಕೊಲ್ಲುವುದು, ಇಲ್ಲವೇ ಪತ್ನಿಯೇ ತನ್ನ ಗಂಡನನ್ನು ಹತ್ಯೆ ಮಾಡಿರುವ ಸುದ್ದಿಗಳನ್ನು ಸಾಮಾನ್ಯವಾಗಿ ಕೇಳಿರುತ್ತೇವೆ. ಇಲ್ಲೊಬ್ಬಳು 'ಮಹಾಸಾಧ್ವಿ' ಹೆಂಡತಿ ಏನು ಮಾಡಿದ್ದಾಳೆ ಗೊತ್ತಾ? ತಾಳಿ ಕಟ್ಟಿದ್ದ ಪತಿಯನ್ನೇ ಬರ್ಬರ ಹತ್ಯೆ ಮಾಡಿದ್ದಾಳೆ. ಅಷ್ಟೆ ಆಗಿದ್ದರೆ ಸುಮ್ಮನಿರಬಹುದಿತ್ತು. ಇಷ್ಟಕ್ಕೆ ಅವಳ ಸೇಡು ತೀರಲಿಲ್ಲ ಎಂದು ಕಾಣಿಸುತ್ತದೆ. ಅದೆಂತಹ ರೋಷ ಇತ್ತೂ ಏನೋ, ಪತಿಯನ್ನು ಕೊಂದ ಬಳಿಕ ಆತನ ಹೃದಯ, ಮೂಗು ಹಾಗೂ ಜನನಾಂಗಗಳನ್ನು ಕತ್ತರಿಸಿ ಅಡುಗೆ ಮಾಡಿದ್ದಾಳೆ! ಆದರೆ ಇದನ್ನು ತಿಂದಿದ್ದಾಳೊ ಇಲ್ಲವೇ ಎಂಬುದು ಗೊತ್ತಾಗಿಲ್ಲ. ಲಾಂಗ್ವಿ ನಗರದಲ್ಲಿ ಈ ಕೃತ್ಯ ನಡೆದಿದ್ದು , 80 ವರ್ಷದ ಪತಿಯನ್ನು ಹತ್ಯೆ ಮಾಡಿರುವ 71 ವಯಸ್ಸಿನ ಈ ಪತ್ನಿಯು ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ಬಹುಶಃ ಈಕೆ ಮಾನಸಿಕ ಖನ್ನತೆಯಿಂದ ಬಳಲುತ್ತಿರಬಹುದು ಎಂದು ಶಂಕಿಸಲಾಗಿದೆ. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com