ಬೀದಿ ನಾಟಕ ತಂಡಗಳಿಂದ ಅರ್ಜಿ ಆಹ್ವಾನ

ಮಂಗಳೂರು: ವಾರ್ತಾ ಇಲಾಖೆಯ ಗ್ರಾಮ ಸಂಪರ್ಕ ಕಾರ್ಯಕ್ರಮದಡಿ ಬೀದಿನಾಟಕ ತಂಡಗಳ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ತಂಡದಲ್ಲಿ ಕನಿಷ್ಠ ಎಂಟು ಸದಸ್ಯರಿದ್ದು, ಈ ಪೈಕಿ ಇಬ್ಬರು ಮಹಿಳಾ ಕಲಾವಿದರು ಇರುವ ತಂಡಕ್ಕೆ ಆದ್ಯತೆ ನೀಡಲಾಗುವುದು. ಆಯ್ಕೆಯನ್ನು ಮೈಸೂರು ವಿಭಾಗ ಮಟ್ಟದಲ್ಲಿ ನಡೆಸಲಾಗುವುದು. ಆಯ್ಕೆಗಾಗಿ ತಂಡಗಳು ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗತಕ್ಕದ್ದು.

ತಂಡಗಳು ತಮ್ಮ ಅರ್ಜಿಗಳನ್ನು ಜಿಲ್ಲಾ ವಾರ್ತಾ ಇಲಾಖೆ ಕಚೇರಿಗೆ ಸಲ್ಲಿಸಬೇಕು. ತಂಡದ ಹೆಸರು, ವಿಳಾಸ, ತಂಡದ ಮುಖ್ಯಸ್ಥರ, ಕಲಾವಿದರ ವಿಳಾಸ, ದೂರವಾಣಿ ಸಂಖ್ಯೆ, ನೋಂದಣಿ ಸಂಖ್ಯೆ ಮತ್ತಿತರ ವಿವರಗಳೊಂದಿಗೆ ಜೂ. 17ರ ಒಳಗಾಗಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಇಲಾಖೆ, ಪಿ.ಡಬ್ಯ್ಲೂ.ಡಿ. ಕಟ್ಟಡ 2ನೇ ಮಹಡಿ, ಆರ್‌.ಟಿ.ಒ. ಬಳಿ, ಮಂಗಳೂರು ಇಲ್ಲಿ ಸಂಪರ್ಕಿಸಬಹುದು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com