ಉಡುಪಿ: ಚಾಲ್ತಿಯಲ್ಲಿರುವ ಪಡಿತರ ಚೀಟಿದಾರರು ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಿರುವ ಅರ್ಜಿದಾರರು (ಅಂತ್ಯೋದಯ, ಎಪಿಎಲ್, ಬಿಪಿಎಲ್ ಕಾರ್ಡುದಾರರು) ಅವರ ಕುಟುಂಬದ 21 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಸದಸ್ಯರ ಎಪಿಕ್ (ಭಾವಚಿತ್ರವಿರುವ ಮತದಾರರ ಗುರುತುಚೀಟಿ) ಮತ್ತು ಯುಐಡಿ (ಯುನಿಕ್ ಐಡೆಂಟಿಟಿ ಕಾರ್ಡ್ = ಆಧಾರ್) ಸಂಖ್ಯೆಗಳನ್ನು ಎಸ್ಎಂಎಸ್ ಮೂಲಕ ಸಲ್ಲಿಸಲು ತಿಳಿಸಲಾಗಿದೆ ಮತ್ತು ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಮಾಹಿತಿಗಾಗಿ ಫ್ಲೆಕ್ಸ್ ಬೋರ್ಡ್ ಪ್ರದರ್ಶಿಸಲಾಗಿದೆ. ಪಡಿತರ ಚೀಟಿಗೆ ಎಪಿಕ್ ಕಡ್ಡಾಯವಾಗಿದ್ದು ಯುಐಡಿ ಐಚ್ಛಿಕವಾಗಿದೆ.
ಮೊಬೈಲ್ ಹೊಂದದೇ ಇರುವವರು ಹಾಗೂ ಎಸ್ಎಂಎಸ್ ಕಳಿಸಲು ಮಾಹಿತಿ ಇಲ್ಲದ ಪಡಿತರ ಚೀಟಿದಾರರು ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಿದವರು ಕುಟುಂಬದ ಎಪಿಕ್ ಮತ್ತು ಯುಐಡಿ ಸಂಖ್ಯೆಗಳನ್ನು ದಾಖಲಿಸಲು ಗ್ರಾ.ಪಂ.ಗಳಲ್ಲಿ ಹಾಗೂ ಫ್ರಾಂಚೈಸಿಗಳಲ್ಲಿ 10 ರೂ. ಸೇವಾ ಶುಲ್ಕ ಪಾವತಿಸಿ ಎಪಿಕ್ ಮತ್ತು ಯುಐಡಿ ಸಂಖ್ಯೆ ನಮೂದು ಮಾಡಲು ಅವಕಾಶ ಕಲ್ಪಿಸಲಾಗಿದೆ.
ಎಸ್ಎಂಎಸ್ ಕಳಿಸಲು ತೊಂದರೆ ಇರುವ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರು ಮತ್ತು ಅರ್ಜಿದಾರರು ಸಂಬಂಧಿಸಿದ ಗ್ರಾ.ಪಂ.ಗಳಲ್ಲಿ ಹಾಗೂ ನಗರ ಪ್ರದೇಶದ ಕಾರ್ಡುದಾರರು, ಅರ್ಜಿದಾರರು ಫ್ರಾಂಚೈಸಿಗಳಲ್ಲಿ ಕುಟುಂಬದ ವಯಸ್ಕರ ಸದಸ್ಯರ ಎಪಿಕ್ ಮತ್ತು ಯುಐಡಿ ಸಂಖ್ಯೆ ದಾಖಲಿಸುವಂತೆ ಕೋರಲಾಗಿದೆ.
0 comments:
Post a Comment