ಕುಂದಾಪುರ: ಜುಲೈ 1ರಂದು ಪತ್ರಿಕಾ ದಿನಾಚರಣೆ

ಕುಂದಾಪುರ: ಪತ್ರಿಕಾ ದಿನದ ಅಂಗವಾಗಿ ಇಲ್ಲಿನ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ  ಜುಲೈ 1ರ ಸಂಜೆ 5 ಗಂಟೆಗೆ ಜ್ಯೂನಿಯರ್ ಕಾಲೇಜು ಕಲಾಮಂದಿರದಲ್ಲಿ ಪತ್ರಿಕಾ ದಿನಾಚರಣೆಯನ್ನು ಆಚರಿಸುತ್ತಿದ್ದು ಸಾಹಿತಿ, ಸಂಘದ ಸ್ಥಾಪಕಾಧ್ಯಕ್ಷ ಎ. ಎಸ್. ಎನ್. ಹೆಬ್ಬಾರ್ ಪ್ರಧಾನ ಆಶಯ ಭಾಷಣ ಮಾಡಲಿದ್ದಾರೆ.
     ಮುಖ್ಯ ಅತಿಥಿಗಳಾಗಿ ಕುಂದಾಪುರದ ಡಿವೈಎಸ್‌ಪಿ  ಸಿ. ಬಿ. ಪಾಟೀಲ ಹಾಗೂ ಇಂಡಿಯನ್ ಎಕ್ಸ್‌ಪ್ರೆಸ್  ಜಿಲ್ಲಾ ವರದಿಗಾರ ದಿನೇಶ ಕಿಣಿ ಉಪಸ್ಥಿತರಿರುವರು. ಪತ್ರಕರ್ತ ಕೆ. ಸಿ. ರಾಜೇಶ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದು ಕುಂದಾಪುರ ತಾ. ಕಾ. ನಿ. ಪ. ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನೊಹಿಸಲಿರುವರು.
    ಪತ್ರಿಕಾ ಏಜೆಂಟರಾದ ಶಂಕರ ಆಚಾರ್ಯ ಮತ್ತು ದಿನೇಶ ಪೈ ಅವರಿಗೆ  ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com