ಶಾಲಾ ದಾಖಲಾತಿ ಆಂದೋಲನ ಜಾಥಾ

ಬೈಂದೂರು : ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸಬ್ಲಾಡಿ ಇಲ್ಲಿಯ ಶಾಲಾ ಮಕ್ಕಳಿಗೆ ಶಾಲಾರಂಭ ಖುಷಿಯೋ ಖುಷಿ ಏಕೆಂದರೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಸರಕಾರಿ ಸೌಲಭ್ಯಗಳ ಜೊತೆಗೆ ದಾನಿಗಳಿಂದ ವಿವಿಧ ಕೊಡುಗೆ ನೀಡಿ ದಾಖಲಾತಿ ಆಂದೋಲನ ಜಾಥಾ ನಡೆಯಿತು.
     ದಾನಿಗಳಾದ ಶ್ರೀ. ಸಬ್ಲಾಡಿ ಮಂಜಯ್ಯ ಶೆಟ್ಟಿ ಇವರು ಪ್ರತಿ ಮಗುವು ಸಂತಸದಿಂದ ಶಾಲೆಯಲ್ಲಿ ಕಲಿಯುವಂತಾಗಬೇಕು ಶಾಲಾ ವಾತಾವರಣ ಖುಷಿ ತಂದು ಮಕ್ಕಳು ಬರುವಂತಾಗಬೇಕು ಈ ನಿಟ್ಟಿನಲ್ಲಿ ಎಲ್ಲಾ ಶಿಕ್ಷಕರು ಪ್ರಯತ್ನಿಸಬೇಕು ಎಂದು ಶಾಲಾ ಎಲ್ಲಾ ವಿದ್ಯಾರ್ಥಿಗಳಿಗೆ ಲೇಖನ ಸಾಮಾಗ್ರಿ ವಿತರಿಸಿದರು.
      ಮುಖ್ಯ ಅತಿಥಿಗಳಾಗಿ ಶ್ರೀ. ನಿವೃತ್ತ ಶಿಕ್ಷಕರಾದ ಶ್ರೀ. ನಾರಾಯಣ ಶೆಟ್ಟಿ ದೇವಲ್ಕುಂದ ಇವರು ವಿದ್ಯಾರ್ಥಿಗಳಿಗೆ ಕೊಡೆ ವಿತರಿಸಿದರು. ಸಬ್ಲಾಡಿ ಯುವಕ ಮಂಡಲದ ಅಧ್ಯಕ್ಷರಾದ ಶ್ರೀ. ರಮೇಶ ಆಚಾರ್ಯ ಮತ್ತು ಮಾರಿ ಕಾಳಿಕಾಂಬ ಯುವಕ ಸಂಘದ ಅಧ್ಯಕ್ಷರಾದ ಶ್ರೀ. ಗಣೇಶ ಮೊಗವೀರ ತಮ್ಮ ಸಂಘದಿಂದ ಶಾಲಾ ಶಾಶ್ವತ ನಿಧಿಗೆ ರೂ. 20,000 ಸಾವಿರ ದೇಣಿಗೆ ನೀಡಿದರು.
     ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಟ್ಟಿಯಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ. ಸಂತೋಷ್ ಕುಮಾರ ಶೆಟ್ಟಿ ಸಬ್ಲಾಡಿ ವಹಿಸಿದರು. ಮುಖ್ಯ ಅತಿಥಿಗಳಾಗಿ ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಶ್ರೀ. ಮಂಜುನಾಥ ಹಾಗೂ ತಲ್ಲೂರು ಸಮೂಹ ಸಂಪನ್ಮೂಲ ಕೇಂದ್ರದ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀ. ಗಣಪತಿ ಹೋಬಳಿದಾರ್  ಉಪಸ್ಥಿತರಿದ್ದರು.
     ಮುಖ್ಯೋಪಾಧ್ಯಾಯರಾದ ಶ್ರೀ. ಉದಯ ಭಂಡಾರ್ಕರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಶಿಕ್ಷಕರಾದ ಶ್ರೀ. ಸಂತೋಷ್ ಕುಮಾರ್ ಸ್ವಾಗತಿಸಿದರು. ಸಹಶಿಕ್ಷಕರಾದ ಶಂಕರ ಪೂಜಾರಿ ಧನ್ಯವಾದ ಸಲ್ಲಿಸಿದರು.



ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com