ತಡೆಗೋಡೆ ನಿರ್ಮಾಣಕ್ಕೆ 8 ಕೋಟಿ ಬಿಡುಗಡೆ

ಬೈಂದೂರು: ಬೈಂದೂರು ಕ್ಷೇತ್ರ ವ್ಯಾಪ್ತಿಯ ದೊಂಬೆ ಹಾಗೂ ಕಳುಹಿತ್ಲು ಭಾಗದಲ್ಲಿ ಕಡಲ್ಕೊರೆತ ಪ್ರದೇಶಗಳಿಗೆ ತಡೆಗೋಡೆ ನಿರ್ಮಾಣಕ್ಕಾಗಿ 8 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಗೋಪಾಲ ಪೂಜಾರಿ ಹೇಳಿದರು. 

ಅವರು ಶಿರೂರು ಗ್ರಾಮದ ಕಳುಹಿತ್ಲು ಭಾಗದ ತೀವ್ರಗೊಂಡ ಕಡಲ್ಕೊರೆತ ಪ್ರದೇಶಕ್ಕೆ ಸಹಾಯಕ ಕಮೀಷನರ್ ಯೋಗೀಶ್ವರ ಜತೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದರು. 

ಚುನಾವಣೆ ನೀತಿ ಸಂಹಿತೆಯ ಕಾರಣದಿಂದ ಅನುದಾನ ನೆನೆಗುದ್ದಿಗೆ ಬಿದ್ದಿತು. ಆದರೆ ಈಗ ಅದಕ್ಕೆ ಪುನಃ ಚಾಲನೆ ನೀಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಆದರೆ ಕಳುಹಿತ್ಲು ಭಾಗದಲ್ಲಿ ಕಡಲ್ಕೊರೆತ ತೀವ್ರಗೊಂಡ ಹಿನ್ನೆಲೆಯಲ್ಲಿ, ಇಲ್ಲಿನ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿ ಗಮನಕ್ಕೆ ತರುವ ಮೂಲಕ ಅವರ ಪ್ರಕತಿ ವಿಕೋಪ ನಿಧಿಯಡಿ 3 ಕೋಟಿ ರೂ. ಅನುದಾನ ನೀಡುವಂತೆ ಮನವಿ ಮಾಡಿ, ಶೀಘ್ರ ತಡೆಗೋಡೆ ಕಾಮಗಾರಿ ಆರಂಭಿಸಲಾಗುವುದು ಎಂದರು. 

ಸಹಾಯಕ ಕಮೀಷನರ್ ಯೋಗೀಶ್ವರ ಮಾತನಾಡಿ, ಪರಿಸ್ಥಿತಿಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದರು. ತಾ.ಪಂ. ಸದಸ್ಯ ರಾಜು ಪೂಜಾರಿ, ಡಿವೈಎಸ್‌ಪಿ ಸಿ.ಸಿ. ಪಾಟೀಲ್, ಬಂದರು ಅಧಿಕಾರಿ ರಾಥೋಡ್, ಬೈಂದೂರು ವಿಶೇಷ ತಹಶೀಲ್ದಾರ ರಾಮಕಷ್ಣ, ಇಂಜಿನಿಯರ್ ನಾಗರಾಜ ಮತ್ತಿತರರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com