ಸಿದ್ಧಾಪುರ: ಬೈಂದೂರು-ವೀರಾಜಪೇಟೆ ರಾಜ್ಯ ಹೆದ್ದಾರಿ ನಡುವಿನ ಅಲ್ಬಾಡಿ ಮೂರುಕೈ ಎಂಬಲ್ಲಿ ಹೆದ್ದಾರಿ ಕುಸಿತ ಉಂಟಾಗಿದೆ. ಇತ್ತೀಚೆಗಷ್ಟೇ ಡಾಮರೀಕರಣಗೊಂಡಿರುವ ಹೆದ್ದಾರಿ ಕುಸಿತ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಶೃಂಗೇರಿ ಮತ್ತು ಕೊಲ್ಲೂರಿಗೆ ತೆರಳುವ ಯಾತ್ರಾರ್ಥಿಗಳು, ಇತರರು ಹೆಚ್ಚಿನ ಸಂಖ್ಯೆಯಲ್ಲಿ ಪಯಣಿಸುವ ಮಾರ್ಗದಲ್ಲಿ ಉಂಟಾಗಿರುವ ಕುಸಿತ ಅಪಾಯಕ್ಕೆಡೆಮಾಡಿಕೊಟ್ಟಿದೆ. ಸಂಬಂಧಿತರು ತಕ್ಷಣ ದುರಸ್ತಿಗೆ ಮುಂದಾಗಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
Subscribe to:
Post Comments (Atom)
0 comments:
Post a Comment