ಕುಂದಾಪುರ: ವಿಶ್ವ ರಕ್ತದಾನಿಗಳ ದಿನಾಚರಣೆ

ಕುಂದಾಪುರ: ಪ್ರತಿಯೊಬ್ಬರಿಗೂ ರಕ್ತದಾನದ ಅರಿವು ಮುಖ್ಯ. ಶಿಬಿರಗಳಲ್ಲಿ ಎಷ್ಟು ರಕ್ತವನ್ನು ಸಂಗ್ರಹಿಸಿದ್ದೇವೆ ಎನ್ನುವುದಕ್ಕಿಂತ ಈ ರಕ್ತದಾನದಿಂದ ಎಷ್ಟು ಜನರಿಗೆ ರಕ್ತದಾನದ ಬಗ್ಗೆ ಅರಿವುವನ್ನು , ಜಾಗೃತಿಯನ್ನು ಮೂಡಿದ್ದೇವೆ ಎನ್ನುವುದು ಮುಖ್ಯವಾಗಿರುತ್ತದೆ. ಪ್ರತಿಯೊಬ್ಬರು ಮೊದಲು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಿಕೊಂಡು ಸದೃಢವಾಗುದರ ಮೂಲಕ ರಕ್ತದಾನಕ್ಕೆ ತಮ್ಮನ್ನು ತೊಡಗಿಸಿಕೊಳ್ಳಿ ಎಂದು .ಪಂ. ಶಿಕ್ಷಣ ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷ ಗಣಪತಿ ಟಿ.ಶ್ರಿಯಾನ್‌ ಹೇಳಿದರು.

ಅವರು ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆಂಷನ್‌ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ ಉಡುಪಿ, ಜಿ.ಪಂ. ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ಏಡ್ಸ್‌ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ಉಡುಪಿ, ಭಂಡಾರ್‌ಕಾರ್ಸ್‌ ಕಾಲೇಜು ಕುಂದಾಪುರ , ಯೂತ್‌ ರೆಡ್‌ಕ್ರಾಸ್‌ ಎನ್‌.ಎಸ್‌.ಎಸ್‌ ಮತ್ತು ಎನ್‌.ಸಿ.ಸಿ ಘಟಕ ಕುಂದಾಪುರ , ಮೊಗವೀರ ಯುವ ಸಮಘಟನೆ ಕುಂದಾಪುರ ಘಟಕ , ಬಾರತೀಯ ರೆಡ್‌ಕ್ರಾಸ್‌ ಸೊಸೈಟಿ ಕುಂದಾಪುರ ವಿಭಾಗ, ಕೆನರಾ ನರ್ಸಿಂಗ್‌ ಕಾಲೇಜು ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಕುಂದಾಪುರದ ಭಂಡಾರ್‌ಕಾರ್ಸ್‌ ಕಾಲೇಜಿನಲ್ಲಿ ಜರಗಿದ 2014ನೇ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಭಂಡಾರ್‌ಕಾರ್ಸ್‌ ಕಾಲೇಜಿನ ಪ್ರಾಂಶುಪಾಲ ಡಾ|ಎನ್‌.ಪಿ.ನಾರಾಯಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ತಹಶೀಲ್ದಾರ್‌ ಎನ್‌.ಗಾಯತ್ರಿ ನಾಯಕ್‌, ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಡಾ|ಅಶೋಕ್‌, ಭಾರತೀಯ ರೆಡ್‌ಕ್ರಾಸ್‌ ಸೊಸೈಟಿಯ ಕುಂದಾಪುರ ಘಟಕದ ಅಧ್ಯಕ್ಷ ಜಯಕರ ಶೆಟ್ಟಿ, ಮೊಗವೀರ ಯುವ ಸಂಘಟನೆ ಕುಂದಾಪುರ ಘಟಕದ ಅಧ್ಯಕ್ಷ ಸದಾನಂದ ಬಳ್ಕೂರು, ತಾಲೂಕು ಆರೋಗ್ಯಾಧಿಕಾರಿ ಡಾ|ಚಿದಾನಂದ ಸಂಜು , ಕೆ.ಎಂ.ಸಿ ವೈದ್ಯಾಧಿಕಾರಿ ಡಾ|ಸುಧಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕುಂದಾಪುರ ಪರಿಸರದಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ಪುರಸಭಾ ಸದಸ್ಯ ವಿಜಯ ಎಸ್‌.ಪೂಜಾರಿ, ದಿವಾಕರ ಖಾರ್ವಿ, ದಿನೆಸ್‌ ಶೇರೇಗಾರ್‌, ಗ್ರೆಗೋರಿ ಲೋಬೋ, ಆಶಿತ್‌ ನಾಯಕ್‌ ಅವರನ್ನು ಸಮ್ಮಾನಿಸಲಾಯಿತು.

ಕಾಲೇಜಿನ ರೆಡ್‌ಕ್ರಾಸ್‌ ಘಟಕದ ಅಧಿಕಾರಿ ಸತ್ಯನಾರಾಯಣ ಅವರು ಸ್ವಾಗತಿಸಿದರು. ಏಡ್ಸ್‌ ನಿಯಂತ್ರಣಾಧಿಕಾರಿ ಮಹಾಬಲೇಶ್ವರ ವಂದಿಸಿದರು. ಅರುಣ್‌ ಎ.ಎಸ್‌.ಕಾರ್ಯಕ್ರಮ ನಿರೂಪಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com