ಉಡುಪಿ ಜಿಲ್ಲಾ ಯುವ ಕವಿ ಸಮ್ಮೇಳನ

ಕುಂದಾಪುರ: ಆಕಾಶವಾಣಿ ಮಂಗಳೂರು ಸಹಯೋಗದೊಂದಿಗೆ ಕುಂದಪ್ರಭ ಟ್ರಸ್ಟ್‌, ಪುಟ್ಟಣ್ಣ ಕುಲಾಲ್‌ ಪ್ರತಿಷ್ಠಾನ ಮಂಗಳೂರು ಆಶ್ರಯದಲ್ಲಿ ಉಡುಪಿ ಜಿಲ್ಲಾ ಯುವ ಕವಿ ಸಮ್ಮೇಳನ ಜುಲೈ ತಿಂಗಳಲ್ಲಿ ನಡೆಯಲಿದೆ.
     ಮೂವತ್ತೇರಡು ವರ್ಷ ಪ್ರಾಯದೊಳಗಿನ ಯುವ ಕವಿಗಳಿಗೆ ಭಾಗವಹಿಸಲು ಅವಕಾಶವಿದೆ. ಆಯ್ಕೆಯಾದ ಉತ್ತಮ ಎಂಟು ಮಂದಿ ಯುವ ಕವಿಗಳು ಕವನ ವಾಚನವನ್ನು ಆಕಾಶವಾಣಿ ಮಂಗಳೂರು ಮುದ್ರಿಸಿ ಪ್ರಸಾರ ಮಾಡುತ್ತದೆ. ಅತ್ಯುತ್ತಮ ಕವನಕ್ಕೆ ಪುಟ್ಟಣ್ಣ ಕುಲಾಲ್‌ ಯುವ ಕವಿ ಪ್ರಶಸ್ತಿ ನೀಡಲಾಗುತ್ತದೆ. ಭಾಗವಹಿಸುವ ಯುವ ಕವಿಗಳು ತಮ್ಮ ಮೂರು ಅತ್ಯುತ್ತಮ ಅಪ್ರಕಟಿತ ಕವನಗಳನ್ನು ಜು.10ರ ಒಳಗೆ ಸಯೋಜಕರು, ಯುವ ಕವಿ ಸಮ್ಮೇಳನ, ಕುಂದಪ್ರಭ, ಎನ್‌.ಆರ್‌, ಕಾಂಪ್ಲೆಕ್ಸ್‌ ಕುಂದಾಪುರ ಇವರಿಗೆ ಕಳುಹಿಸಬೇಕು ಎಂದು ತಿಳಿಸಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com