ಮಾರಣಕಟ್ಟೆ ಮೇಳದ ಹಿರಿಯ ಕಲಾವಿದರಿಗೆ ಸಮ್ಮಾನ

ಚಿತ್ತೂರು: ಮಾರಣಕಟ್ಟೆ ಮೇಳದ ಕೊನೆಯದೇವರ ಸೇವೆ ಆಟದಂದು ಮೇಳದ ವತಿಯಿಂದ ಹಿರಿಯ ಕಲಾವಿದರನ್ನು ಸಮ್ಮಾನಿಸುವ ಕಾರ್ಯಕ್ರಮ ಶ್ರೀ ಕ್ಷೇತ್ರ ಮಾರಣಕಟ್ಟೆಯಲ್ಲಿ ಬುಧವಾರ ಜರಗಿತು.

ಯಕ್ಷಗಾನದ ಹಿರಿಯ ವಿಮರ್ಶಕ ಮಣಿಪಾಲ ಎಂ.ಐ.ಟಿ.ಯ ಪ್ರಾಧ್ಯಾಪಕ ಪ್ರೊ|ಎಸ್‌.ವಿ.ಉದಯಕುಮಾರ ಶೆಟ್ಟಿ ಅವರು ಕಲಾವಿದರನ್ನು ಸಮ್ಮಾನಿಸಿ ಮಾರಣಕ್ಷೇತ್ರದ ಆಡಳಿತ ಮಂಡಳಿ ಹಿರಿಯ ಕಲಾವಿದರೊಂದಿಗೆ ಸಿಬ್ಬಂದಿವರ್ಗವನ್ನೂ ಸಮ್ಮಾನಿಸಿ ಶ್ಲಾಘನೀಯಕಾರ್ಯ ಮಾಡಿದೆ ಎಂದರು.

ಶ್ರೀ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಹಿರಿಯ ಕಲಾವಿದ ಆಲೂರುತೇಜ, ಚಂಡೆ ವಾದಕ ವಾಸುದೇವ ಭಟ್‌, ಮೇಳದ ಸಿಬ್ಬಂದಿ ಅಣ್ಣಪ್ಪ ಗೌಡ ಅವರನ್ನು ಪ್ರಶಸ್ತಿ ಪತ್ರ ನಗದಿನೊಂದಿಗೆ ಸಮ್ಮಾನಿಸಲಾಯಿತು.

ಹಿರಿಯ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ, ಚಿತ್ತೂರು ಗ್ರಾ.ಪಂ. ಅಧ್ಯಕ್ಷ ಸುರೇಂದ್ರ ಶೆಟ್ಟಿ , ನಿವೃತ್ತ ಅಧ್ಯಾಪಕ ಶಂಕರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com