ಲಾರಿ ಮಾಲೀಕರ ಬೇಡಿಕೆಗೆ ಸರಕಾರ ಸ್ಪಂದಿಸಬೇಕು: ಮನ್ಸೂರ್‌

ಕುಂದಾಪುರ: ಕರ್ನಾಟಕ ಲಾರಿ ಮಾಲಕರ ಸಂಘಗಳ ಒಕ್ಕೂಟವು ಕೇಂದ್ರ ಮತ್ತು ರಾಜ್ಯ ಸರಕಾರಗಳ ಮುಂದೆ ಕೆಲವು ಬೇಡಿಕೆಗಳನ್ನು ಇರಿಸುತ್ತ ಬಂದಿದ್ದು, ಸರಕಾರಗಳು ಅವುಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಒಕ್ಕೂಟದ ಜಂಟಿ ಕಾರ್ಯದರ್ಶಿ ಮನ್ಸೂರ್‌ ಇಬ್ರಾಹಿಂ ಮರವಂತೆ ಒತ್ತಾಯಿಸಿದ್ದಾರೆ.

ವಾಹನ ಮಾರಾಟದಲ್ಲಿ ಕುಸಿತವಾಗಿರುವ ಹಿನ್ನೆಲೆಯಲ್ಲಿ ವಾಹನ ತಯಾರಕರು ಕೇಂದ್ರ ಸರಕಾರದಿಂದ ಸುಂಕ ಕಡಿತ ಮಾಡಿಸಿಕೊಂಡಿದ್ದಾರೆ. 12 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನಗಳ ಬಳಕೆಯನ್ನು ನಿಷೇಧಿಸಲು ಕೇಂದ್ರ ಸರಕಾರದ ಮೇಲೆ ಒತ್ತಡ ತರುತ್ತಿದ್ದಾರೆ. ಸರಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 8 ವರ್ಷ ಮೀರಿದವುಗಳನ್ನು ನಿಷೇಧಿಸಲು ಯೋಚಿಸುತ್ತಿದೆ ಎನ್ನಲಾಗಿದೆ. ಇದು ಜಾರಿಯಾದರೆ ರಾಜ್ಯದ 40 ಲಕ್ಷ ವಾಹನ ಮಾಲೀಕರು, 1.2 ಕೋಟಿ ಕೆಲಸಗಾರರು ನಿರ್ಗತಿಕರಾಗುವರು. ದೇಶಾದ್ಯಂತದ ವಾಹನ ಮಾಲೀಕರು ಮತ್ತು ಕಾರ್ಮಿಕರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮುಂದೆ ಒಕ್ಕೂಟ ಇರಿಸಿರುವ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕೆಂದು ಅವರು ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

ಹೆದ್ದಾರಿಗಳಲ್ಲಿ ಸರಕು ಸಾಗಣೆ ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶ ನೀಡಬೇಕು. ಕನಿಷ್ಠ ಬಾಡಿಗೆ ದರ ನಿಗದಿ, ಹೆದ್ದಾರಿ ಶುಲ್ಕ ಸರಕು ಮಾಲೀಕರಿಗೆ ವರ್ಗಾವಣೆ, ರಾಷ್ಟ್ರೀಯ ಪರವಾನಿಗೆ ನೀಡಲು ಇಬ್ಬರು ಚಾಲಕರಿರಬೇಕೆಂಬ ಷರತ್ತಿನ ಮತ್ತು ಚಾಲಕರಾಗಲು ಕನಿಷ್ಠ ವಿದ್ಯಾರ್ಹತೆಯ ರದ್ದತಿ, ಹೆದ್ದಾರಿಗಳಲ್ಲಿ ಚಾಲಕರಿಗೆ ಮೂಲಸೌಕರ್ಯ ಸƒಷ್ಟಿ, ಅಧಿಕಾರಿಗಳಿಂದ ನಡೆಯುತ್ತಿರುವ ಕಿರುಕುಳಕ್ಕೆ ಕೊನೆ ಇತ್ಯಾದಿ ಒಕ್ಕೂಟದ ಬೇಡಿಕೆಯಾಗಿವೆ ಎಂದು ಅವರು ತಿಳಿಸಿದ್ದಾರೆ.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com