ಪಡಿತರ ಚೀಟಿದಾರರು ಎಸ್‌ಎಂಎಸ್‌ ಮಾಡದಿದ್ದರೆ ಪಡಿತರ ಸ್ಥಗಿತ. ಮಾಹಿತಿ ಓದಿ

ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಿ, ದುರುಪಯೋಗ ತಡೆಯಲು ಪಡಿತರ ಚೀಟಿದಾರರ ಮೊಬೈಲ್ ಸಂಖ್ಯೆ, ಎಪಿಕ್(ಮತದಾರರ ಭಾವಚಿತ್ರ ಗುರುತಿನ ಚೀಟಿ) ಸಂಖ್ಯೆ ಹಾಗೂ ಆಧಾರ್ ಸಂಖ್ಯೆಯನ್ನು ಪಡೆಯಲಾಗುತ್ತಿದೆ. ಇದನ್ನು ನೀಡಲು ತಪ್ಪಿದಲ್ಲಿ ಪಡಿತರ ಚೀಟಿಗಳಿಗೆ ಮುಂದಿನ ತಿಂಗಳಿನಿಂದ ಪಡಿತರ ತಡೆ ಹಿಡಿಯಲಾಗುವುದು ಎಂದು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಪಡಿತರ ಚೀಟಿದಾರರು ಮೊದಲು ತಮ್ಮ ಮೊಬೈಲ್‌ನಿಂದ RCMOB ಎಂದು ಟೈಪ್‌ ಮಾಡಿ ಒಂದು ಸ್ಪೇಸ್‌ ಬಿಟ್ಟು ತಮ್ಮ ರೇಶನ್‌ ಕಾರ್ಡು ಸಂಖ್ಯೆಯನ್ನು ನಮೂದಿಸಿ 9212357123 ಸಂಖ್ಯೆಗೆ ಎಸ್‌ಎಂಎಸ್‌ ಕಳುಹಿಸಬೇಕು. ಅನಂತರ ಅದೇ ಮೊಬೈಲ್‌ನಿಂದ RCEPIC ಎಂದು ಟೈಪ್‌ ಮಾಡಿ ಒಂದು ಸ್ಪೇಸ್‌ ಬಿಟ್ಟು EPIC ಸಂಖ್ಯೆಯನ್ನು ನಮೂದಿಸಿ 9212357123 ಸಂಖ್ಯೆಗೆ ಎಸ್‌ಎಂಎಸ್‌ ಕಳುಹಿಸಬೇಕು. ಅದೇ ಪ್ರಕಾರದಲ್ಲಿ ಕುಟುಂಬದ ಇತರ ಸದಸ್ಯರ EPIC  ಸಂಖ್ಯೆಯನ್ನು ನಮೂದಿಸಿ ಎಸ್‌ಎಂಎಸ್‌ ಕಳುಹಿಸಬೇಕು.

ಪಡಿತರ ಚೀಟಿದಾರರು UID ಸಂಖ್ಯೆ ಹೊಂದಿದ್ದಲ್ಲಿ ಅದೇ ಮೊಬೈಲ್‌ನಲ್ಲಿ RCUID ಎಂದು ಟೈಪ್‌ ಮಾಡಿ ಒಂದು ಸ್ಪೇಸ್‌ ಬಿಟ್ಟು UID ಸಂಖ್ಯೆ ನಮೂದಿಸಿ 9212357123 ಸಂಖ್ಯೆಗೆ ಕುಟುಂಬದ ಮುಖ್ಯಸ್ಥರು ಹಾಗೂ ಇತರ ಸದಸ್ಯರ UID ಸಂಖ್ಯೆಯನ್ನು ಸಹ ಅದೇ ಕ್ರಮದಲ್ಲಿ ಎಸ್‌ಎಂಎಸ್‌ ಮೂಲಕ ಕಳುಹಿಸಬೇಕು. ಒಂದೊಮ್ಮೆ ಕಾರ್ಡಿನಲ್ಲಿರುವ ಎಲ್ಲ ಸದಸ್ಯರ EPIC/UID ಸಂಖ್ಯೆ ಇಲ್ಲದಿದ್ದಲ್ಲಿ ಎಷ್ಟು ಸದ್ಯಸರ ಬಳಿ EPIC/UID ಸಂಖ್ಯೆ ಇದೆಯೋ ಅಷ್ಟನ್ನು ನೀಡಿ ಉಳಿದ ಸದಸ್ಯರ ಮಾಹಿತಿಯನ್ನು EPIC/UID ಸಂಖ್ಯೆ ಪಡೆದ ಅನಂತರ ನೀಡಬಹುದು. ಪಡಿತರ ಚೀಟಿದಾರರು ಮೊಬೈಲ್‌ ಹೊಂದಿರದೆ ಇದ್ದರೆ ಪರಿಚಯದವರ ಮೊಬೈಲ್‌ ಬಳಸಬಹುದು. ಆದರೆ ಒಂದು ಮೊಬೈಲ್‌ ಸಂಖ್ಯೆಯನ್ನು ಮೂರಕ್ಕಿಂತ ಹೆಚ್ಚಿನ ಕಾರ್ಡುಗಳಿಗೆ ಬಳಸುವಂತಿಲ್ಲ.

ಈಗಾಗಲೇ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದು ಪಡಿತರ ಚೀಟಿ ದೊರೆಯದೆ ಇದ್ದವರು ಕೂಡ ಅವರ ಮೊಬೈಲ್‌ನಿಂದ RCMOB ಎಂದು ಟೈಪ್‌ ಮಾಡಿ ಒಂದು ಸ್ಪೇಸ್‌ ಬಿಟ್ಟು ತಮ್ಮ ಸರಿಯಾದ ಅರ್ಜಿ ಸಂಖ್ಯೆಯನ್ನು ನಮೂದಿಸಿ 9212357123 ಸಂಖ್ಯೆಗೆ ಎಸ್‌ಎಂಎಸ್‌ ಕಳುಹಿಸಿ ಅನಂತರ ಈ ಮೇಲೆ ತಿಳಿಸಿದ ಕ್ರಮದಲ್ಲಿಯೇ ತಮ್ಮ  EPICಸಂಖ್ಯೆ ಹಾಗೂ UID ಸಂಖ್ಯೆಯನ್ನು ಎಸ್‌ಎಂಎಸ್‌ ಮೂಲಕ ಕಳುಹಿಸಬೇಕು. EPIC ಹಾಗೂ UID ಸಂಖ್ಯೆಯನ್ನು ಎಸ್‌ಎಂಎಸ್‌ ಮಾಡದವರ ಅರ್ಜಿ ಆದ್ಯತೆ ಮೇರೆಗೆ ಇತ್ಯರ್ಥ ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

sending SMS is compulsory for Ration card validation: DC
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com