ತೆಕ್ಕಟ್ಟೆ: ಮಕ್ಕಳ ಮನಸ್ಸಿನ ಭಾವನೆಗೆ ಪೂರಕವಾದ ವಾತವರಣವನ್ನು ಕಲ್ಪಿಸುವ ನಿಟ್ಟಿನಿಂದ ಪೋಷಕರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣದೊಂದಿಗೆ ಮಕ್ಕಳ ಮನೋ ವಿಕಾಸಕ್ಕೆ ಪೋಷಕರು ಪ್ರೀತಿಯಿಂದ ಸ್ಪಂದಿಸುವ ಮನೋಭಾವವನ್ನು ಬೆಳಸಿಕೊಳ್ಳಿ ಎಂದು ತೆಕ್ಕಟ್ಟೆ ವಿಶ್ವ ವಿನಾಯಕ ಆಂಗ್ಲ ಮಾಧ್ಯಮ ಶಾಲೆಯ ಅಕಾಡೆಮಿಕ್ ನಿರ್ದೇಶಕ ಡಾ| ಎಕ್ಕಾರು ಸುರೇಶ್ ಶೆಟ್ಟಿ ಹೇಳಿದರು.
ಅವರು ತೆಕ್ಕಟ್ಟೆ ವಿಶ್ವ ವಿನಾಯಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಶಿಕ್ಷಕ ರಕ್ಷಕರ ಸಭೆಯನ್ನು ಉದ್ಧೇಶಿಸಿ ಮಾತನಾಡಿದರು.
ತೆಕ್ಕಟ್ಟೆ ವಿಶ್ವ ವಿನಾಯಕ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ನಾಗರತ್ನ.ಎನ್.ಪಾಲನ್ ಮಾತನಾಡಿ ಬಾಲ್ಯದಲ್ಲಿ ಯೇ ಮಕ್ಕಳಿಗೆ ಸ್ವತಂತ್ರತೆಯನ್ನು ನೀಡುವುದ್ದರೊಂದಿಗೆ ಮಗುವಿನ ಭಾವನೆಗೆ ಸರಿಯಾಗಿ ಸ್ಪಂದಿಸುವ ಮೂಲಕ ಮಗುವಿನ ಪ್ರತಿಭೆಯನ್ನು ಇನ್ನೊಂದು ಮಗುವಿನೊಂದಿಗೆ ಹೋಲಿಕೆ ಮಾಡದಿರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಕ್ಕಳ ಪೋಷಕರು ಹಾಗೂ ಶಿಕ್ಷಕ ವೃಂದ ಹಾಜರಿದ್ದರು .
ಪ್ರಾಂಶುಪಾಲೆ ನಾಗರತ್ನ.ಎನ್.ಪಾಲನ್ ಸ್ವಾಗತಿಸಿ, ಶಿಕ್ಷಕಿ ರಂಜಿತ ನಿರೂಪಿಸಿ, ಶಿಕ್ಷಕಿ ಆಶಾಲತಾ ವಂದಿಸಿದರು.
0 comments:
Post a Comment