ಉಡುಪಿ ತಾ. ಬ್ರಾಹ್ಮಣ ಮಹಾಸಭಾ ಪದಗ್ರಹಣ

ಉಡುಪಿ : ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ 2014-17ನೇ ಸಾಲಿನ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ಜೂ. 8ರ ಅಪರಾಹ್ನ 3 ಗಂಟೆಗೆ ಉಡುಪಿ ರಥಬೀದಿ ಭಂಡಾರಕೇರಿ ಮಠದಲ್ಲಿ ಜರಗಲಿದೆ ಎಂದು ಅಧ್ಯಕ್ಷ ನರಸಿಂಹ ಉಪಾಧ್ಯ ಅಂಬಲಪಾಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪರ್ಯಾಯ ಶ್ರೀ ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದು ಮಹಾಸಭಾದ ಗೌರವಾಧ್ಯಕ್ಷ ಕೆ. ಕೃಷ್ಣರಾಜ ಸರಳಾಯ ಅಧ್ಯಕ್ಷತೆ ವಹಿಸಲಿದ್ದಾರೆ. ಅಂಬಲಪಾಡಿ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ನಿ.ಬೀ. ವಿಜಯ ಬಲ್ಲಾಳ, ಮಾಜಿ ಶಾಸಕ ಕೆ. ರಘುಪತಿ ಭಟ್‌, ನಿಸರ್ಗ ಆಯುರ್ವೇದಿಕ್‌ ಮೆಡಿಸಿನ್‌ ರಿಸರ್ಚ್‌ ಸೆಂಟರ್‌ನ ಡಾ| ಅಶೋಕ್‌ ಕುಮಾರ್‌, ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಮೊಕ್ತೇಸರ ರಾಘವೇಂದ್ರ ರಾವ್‌, ನಾಗರಾಜ ಬಲ್ಲಾಳ, ಉದ್ಯಮಿ ರಂಜನ್‌ ಕಲ್ಕೂರ, ಜಯಪ್ರಕಾಶ್‌ ಕೆದ್ಲಾಯ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com