ವಿಶೇಷ ದಾಖಲಾತಿ ಆಂದೋಲನಕ್ಕೆ ಚಾಲನೆ

ಬಸ್ರೂರು: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೋಣಿಯಲ್ಲಿ ಇಂದು ವಿಶೇಷ ದಾಖಲಾತಿ ಆಂದೋಲನಕ್ಕೆ ಕುಂದಾಪುರ ತಾ.ಪಂ ಅಧ್ಯಕ್ಷ ಭಾಸ್ಕರ ಬಿಲ್ಲವ ಅವರು ಕೋಣಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ , ಸದಸ್ಯ ಸಂಜೀವ ಮೊಗವೀರ ಅವರಿಗೆ ವಿಶೇಷ ದಾಖಲಾತಿ ಆಂದೋಲನ 2014 ರ ಕರಪತ್ರವನ್ನು ಹಸ್ತಾಂತರಿಸಿ ಚಾಲನೆ ನೀಡಿದರು. ಅವರು ಮಾತನಾಡಿ 6 ರಿಂದ 14 ರ ವಯಸ್ಸಿನ ಮಕ್ಕಳ ಹಾಜರಾತಿ ಗೈರುಹಾಜರಾದ ಮಕ್ಕಳನ್ನು ಗುರುತಿಸಿ ಶಾಲೆಗೆ ಸೇರಿಸುವ ಕಾರ್ಯ ಪ್ರತಿ ಶಾಲೆಯಲ್ಲಿ ನಡೆಯಬೇಕಾಗಿದೆ. ಈ ಹಿನ್ನಲೆಯಲ್ಲಿ ಈ ಸಭೆ ಮಹತ್ವ ಪಡೆಯುತ್ತದೆ ಎಂದರು.
      ಸಮಾರಂಭದ ಅಧ್ಯಕ್ಷತೆಯನ್ನು ಕೋಣಿ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ ವಹಿಸಿದ್ದು ಶಾಲೆಯಲ್ಲಿ ದಾಖಲಾತಿ ಆಂದೋಲನಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತದೆ ಎಂದರು. ಸಮಾರಂಭದಲ್ಲಿ ಕುಂದಾಪುರ ತಾ.ಪಂ ಅಧ್ಯಕ್ಷ ಭಾಸ್ಕರ ಬಿಲ್ಲವ ಅವರನ್ನು ಕೋಣಿ ಶಾಲೆಯ ಮತ್ತು ಸಮೂಹ ಸಂಪನ್ಮೂಲ ಕೇಂದ್ರ ವ್ಯಾಪ್ತಿಯ ಶಿಕ್ಷಕರ ಪರವಾಗಿ ಸಮ್ಮಾನಿಸಲಾಯಿತು.
     ಕೆ.ಜಿ. ಜಗನ್ನಾಥ ರಾವ್‌ ಸರಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಸುರೇಶಪ್ಪ ಶಿಕ್ಷಣ ತಜ್ಞ ಜೂಜೆ ಡಿ ಸೋಜ, ಶಾಲಾ ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷೆ ಗೀತಾ ಉಪಸ್ಥಿತರಿದ್ದು ಆಂದೋಲನಕ್ಕೆ ಶುಭ ಕೋರಿದರು.
    ಕೋಣಿ ಸಮೂಹ ಸಂಪನ್ಮೂಲ ವ್ಯಕ್ತಿ ಸುಮನ ಎನ್‌. ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಪ್ಲೇವಿ ಮೋಲಿ ಡಿ ಸೋಜ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಭವಾನಿ ವಂದಿಸಿದರು. ಬಳಿಕ ವಿಶೇಷ ಜಾಥಾ ನಡೆಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com