ಸಿಇಟಿಯಲ್ಲಿ ಸಾಧನೆ. ವಿದ್ಯಾರ್ಥಿನಿಗೆ ನೆರವು

ಬೈಂದೂರು:  ಪ್ರಸಕ್ತ ಸಾಲಿನ ವೃತ್ತಿ ಶಿಕ್ಷಣ  ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ)  ಮೆಡಿಕಲ್  ವಿಭಾಗದಲ್ಲಿ  37 ನೇ ಸ್ಥಾನ  ಹಾಗೂ ಇಂಜಿನಿಯರಿಂಗ್ ನಲ್ಲಿ  227 ನೇ ಸ್ಥಾನ ಪಡೆದ ಬೈಂದೂರು ಕ್ಷೇತ್ರದ ಕುಮಾರಿ ಕ್ಷಿಪ್ರ ದೇವಾಡಿಗ ಇವರಿಗೆ ಬೈಂದೂರು ದೇವಾಡಿಗರ ಒಕ್ಕೂಟದ ವತಿಯಿಂದ ವಿದ್ಯಾರ್ಥಿನಿಯ ಕಾಲೇಜು  ದಾಖಲಾತಿಗೆ ತುರ್ತು  ಧನ ಸಹಾಯ ನೀಡಿ ಅಭಿನಂದನೆ ಸಲ್ಲಿಸಲಾಯಿತು .  
ವಿದ್ಯಾರ್ಥಿಯ ಮನೆ ಭೇಟಿ ನೀಡಿ ಸಹಾಯಧನ ವಿತರಿಸಲಾಯಿತು. ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ ತುರ್ತು  ಧನ ಸಹಾಯದ  ಚೆಕ್  ಹಾಗೂ  ಸ್ಮರಣಿಕೆ ನೀಡಿ ಶುಭ ಕೋರಿದರು. ದೇವಾಡಿಗರ ಒಕ್ಕೂಟ ಇದರ ಪ್ರದಾನ ಕಾರ್ಯದರ್ಶಿ  ರಾಘವೇಂದ್ರ ದೇವಾಡಿಗ , ಸಲಹಾ ಸಮಿತಿಯ ಹಿರಿಯ ಸದಸ್ಯರಾದ  ಎಸ್  ಡಿ  ಹೆನುಬೇರು , ಕೆ. ಜಿ. ಸುಬ್ಬ ದೇವಾಡಿಗ,  ಗ್ರಾಮ ಪಂಚಾಯತ್  ಅದ್ಯಕ್ಷ  ಕೃಷ್ಣ ಮೂರ್ತಿ  ದೇವಾಡಿಗ , ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ , ಸತ್ಯ ಪ್ರಸನ್ನ,  ಮಣಿ ಕಂಠ ದೇವಾಡಿಗ, ಸತೀಶ್ ದೇವಾಡಿಗ, ಚರಣ್ ಬೈಂದೂರು, ನಾರಾಯಣ ಮಾಸ್ಟರ್ ಉಪಸ್ಥಿತರಿದ್ದರು .
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com