ಪೊಲೀಸರು ನಿಮ್ಮವರೇ, ಠಾಣೆಗೆ ಬರಲು ಅಂಜಿಕೆ ಬೇಡ: ವೃತ್ತ ನಿರೀಕ್ಷಕ ಸುದರ್ಶನ್

ಬೈಂದೂರು:  ಪಾಲಕರು ಮಕ್ಕಳಿಗೆ ಎಳವೆಯಲ್ಲಿಯೇ ಪೊಲೀಸರ ಬಗ್ಗೆ ಭಯ ಮೂಡಿಸುತ್ತಾರೆ. ಇದರಿಂದ ಮಕ್ಕಳಿಗೆ ಪೊಲೀಸರ ಬಗೆಗೆ ಭಯವಿದೆ. ಈ ಪ್ರವೃತ್ತಿ ನಿಲ್ಲಬೇಕು. ಪೊಲೀಸರ ಬಗ್ಗೆ ಆತ್ಮೀಯ ಭಾವನೆ ಮೂಡಿಸಬೇಕು ಎಂದು ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್ ಹೇಳಿದರು. ಯಡ್ತರೆ ರಾಹುತನಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪೊಲೀಸ್ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. 
      ಯಾವುದೇ ಅಪರಾಧ ಚಟುವಟಿಕೆ ನಡೆದರೂ, ಧೈರ್ಯವಾಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಿ. ಇದಕ್ಕೆ ಆತಂಕಪಡುವ ಅಗತ್ಯವಿಲ್ಲ, ನಾವು ನಿಮ್ಮ ಬಂಧುಗಳಿದ್ದಂತೆ ಎಂದವರು ಹೇಳಿದರು. ಬಹುತೇಕ ಜನ ಅಪರಾಧ ಚಟುವಟಿಕೆಗಳು ನಡೆದರೂ ಠಾಣೆಗೆ ಬಂದು ಪ್ರಕರಣ ದಾಖಲು ಮಾಡಲು ಹಿಂದೇಟು ಹಾಕುತಿದ್ದಾರೆ. ಒಂದು ವೇಳೆ ಪ್ರಕರಣ ದಾಖಲಾದರೆ ಪದೇ ಪದೇ ಕೋರ್ಟ್ ಅಲೆದಾಡಬೇಕು, ಹಣ ವ್ಯಯಿಸಬೇಕು ಎಂಬ ತಪ್ಪು ಕಲ್ಪನೆಯೇ ಇದಕ್ಕೆ ಕಾರಣ. ಇದರಿಂದಾಗಿ ಆರೋಪಿಗಳು ಕಾನೂನು ಕ್ರಮಗಳಿಂದ ತಪ್ಪಿಸಿಕೊಳ್ಳುತ್ತಾರೆ. ವಾಸ್ತವ ಹಾಗಿಲ್ಲ. ಆರೋಪಿಗಳು ಮಾತ್ರ ನ್ಯಾಯಾಲಯಗಳಿಗೆ ಅಲೆಯಬೇಕು. ಪ್ರಕರಣ ದಾಖಲಿಸಿದವರು ಹಾಗೂ ಸಾಕ್ಷಿ ಹೇಳಿದವರು ವರ್ಷಕ್ಕೆ ಒಮ್ಮೆ ನ್ಯಾಯಾಲಯಕ್ಕೆ ಹಾಜರಾದರೂ ಸಾಕು. ಅವರಿಗೆ ನ್ಯಾಯಾಲಯದಲ್ಲಿ ವಾದಿಸಲು ಸರ್ಕಾರದ ಪಬ್ಲಿಕ್ ಪ್ರಾಸಿಕ್ಯೂಟರ್ ಇರುತ್ತಾರೆ. ಶುಲ್ಕ ಪಾವತಿ ಸಬೇಕಾಗಿಲ್ಲ ಕೆಲವೊಮ್ಮೆ ಪ್ರಯಾಣ ಭತ್ಯೆ ಸಹ ಕೋರ್ಟ್ ನೀಡುತ್ತದೆ ಎಂದರು. 

ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿನಿಯರ ಮೇಲೆ ಮಾನಭಂಗ ಯತ್ನ ನಡೆದಾಗ ಪಾಲಕರು ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪ್ರಕರಣ ದಾಖಲಿಸಲು ಹಿಂದೇಟು ಹಾಕು ತ್ತಿದ್ದಾರೆ. ಮೊದಲು ಈ ಮನೋಭಾವ ಬದಲಾಗಬೇಕು ಎಂದವರು ನುಡಿದರು. ಸಭೆಯಲ್ಲಿ ವತ್ತನಿರೀಕ್ಷಕರು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ಬೈಂದೂರು ಠಾಣಾಧಿಕಾರಿ ಸಂತೋಷ ಕಾಯ್ಕಿಣಿ, ರಾಹುತನಕಟ್ಟೆ ಶಾಲಾ ಮುಖ್ಯ ಶಿಕ್ಷಕ ಕಷ್ಣಯ್ಯ ಶೆಟ್ಟಿ, ಶಿವರಾಮ ಪೂಜಾರಿ ಯಡ್ತರೆ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com