ದ್ರಾವಿಡ ಬ್ರಾಹ್ಮಣ ಪರಿಷತ್ತು- ವಾರ್ಷಿಕ ಅಧಿವೇಶನ

ಕುಂದಾಪುರ: ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್‌ ಇದರ 20ನೇ ವಾರ್ಷಿಕ ಅಧಿವೇಶನ ಹಾಗೂ ಸಾಮಾನ್ಯ ಸಭೆ ಕೋಟೇಶ್ವರದ ಶ್ರೀ ವಾದಿರಾಜ ಕಲ್ಯಾಣ ಮಂಟಪದಲ್ಲಿ ಜರಗಿತು. .
    ಈ ಸಮಾರಂಭವನ್ನು ನಿವೃತ್ತ ಪಾಧ್ಯಾಪಕ ಡಾ|ಸೋಮಶೇಖರ ಉಡುಪ ಉದ್ಘಾಟಿಸಿದರು. ತಾಲೂಕು ಪರಿಷತ್ತಿನ ಅಧ್ಯಕ್ಷ ಕೆ. ಶ್ರೀನಿವಾಸ ಹೆಬ್ಟಾರ್‌ ಅಧ್ಯಕ್ಷತೆ ವಹಿಸಿದ್ದು, ಕಾಳಾವರ ಶ್ರೀ ಸುಬ್ರಮಣ್ಯ ದೇವಸ್ಥಾನ ಸಮಿತಿಯ ಅಧ್ಯಕ್ಷ ಪ್ರೋ| ಶಂಕರರಾವ್‌ ಕಾಳಾವರ ಮುಖ್ಯ ಅತಿಥಿಗಳಾಗಿದ್ದರು.
  ಶೃಂಗೇರಿ ಶ್ರೀ ಶಾರದಾ ಪೀಠ ಸಂಸ್ಥಾನದ ಪ್ರಾಂತೀಯ ಧರ್ಮಾಧಿಕಾರಿ ಡಾ| ಎಚ್‌.ವಿ. ನರಸಿಂಹಮೂರ್ತಿ ಶುಭಾಶಂಸನೆಗೆ„ದರು.
  ಈ ಸಂದರ್ಭ ಡಾ| ಎಚ್‌.ವಿ. ನರಸಿಂಹಮೂರ್ತಿ ಅವರು ಬರೆದ 'ರುದ್ರಾಧ್ಯಾಯ' ಪುಸ್ತಕವನ್ನು ಅಧ್ಯಕ್ಷರು ಬಿಡುಗಡೆಗೊಳಿಸಿದರು ಮತ್ತು ತಾಲೂಕಿನ ವಿವಿಧ ವಲಯಗಳ ಎಸ್‌.ಎಸ್‌.ಎಲ್‌.ಸಿ. ಹಾಗೂ ದ್ವಿತೀಯ ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿದ 25 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
   ಬಳಿಕ ನಡೆದ ಸಾಮಾನ್ಯ ಸಭೆಯ ವರದಿಯನ್ನು ಪರಿಷತ್‌ ಪ್ರಧಾನ ಕಾರ್ಯದರ್ಶಿ ಬಿ.ಜಿ. ಸೀತರಾಮ ಧನ್ಯ ಮಂಡಿಸಿದರು. ಪರಿಷತ್‌ ಅಧ್ಯಕ್ಷ ಕೆ. ಶ್ರೀನಿವಾಸ ಹೆಬ್ಟಾರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
   ಖಜಾಂಚಿ ಸತ್ಯನಾರಾಯಣ ಅರಸ್‌ 2013-14 ಆಯವ್ಯಯ ಪತ್ರ ಮಂಡಿಸಿದರು. ಜೊತೆ ಕಾರ್ಯದರ್ಶಿ ಶ್ರೀನಿವಾಸ ಭಟ್ಟ ಕಾರ್ಯಕಾರಿ ಸಮಿತಿಯ ಸಭೆಗಳಲ್ಲಿ ಅಂಗೀಕೃತಗೊಂಡ ನಿರ್ಣಯಗಳನ್ನು ಮಂಡಿಸಿದರು. .
    ಅಧ್ಯಕ್ಷೀಯ ಅವಧಿಯ ಪೂರ್ವಾರ್ಧದಲ್ಲಿ ವೇ.ಮೂ. ವಕ್ವಾಡಿ ಸುಬ್ರಮಯ ಐತಾಳ್‌ ಹಾಗೂ ಉತ್ತರಾರ್ಧದಲ್ಲಿ ಗಣೇಶ್‌ ರಾವ್‌ ಕುಂಭಾಸಿ ಅಧ್ಯಕ್ಷರಾಗುವುದೆಂದು ತೀರ್ಮಾನಿಸಲಾಯಿತು. ಹಳ್ಳಿ ಶ್ರೀನಿವಾಸ ಭಟ್ಟ ಪ್ರಧಾನ ಕಾರ್ಯದರ್ಶಿ, ರಘುರಾಮ ರಾವ್‌ ಕುಂದಾಪುರ ಕೋಶಾಧಿಕಾರಿ, ವಿಪ್ರವಾಣಿ ಸಂಪಾದಕರಾಗಿ ಬಳ್ಕೂರು ಭಾಸ್ಕರ್‌ ಉಡುಪ, ಉಪಾಧ್ಯಕ್ಷರಾಗಿ ಬಿ.ಆರ್‌. ಸುಬ್ರಮಣ್ಯ ಐತಾಳ್‌ ಶಂಕರನಾರಾಯಣ, ಮಹಿಳಾ ವೇದಿಕೆ ಅಧ್ಯಕ್ಷೆಯಾಗಿ ಅನ್ನಪೂರ್ಣ ಎಂ. ನಾಗೂರು ಅವರು ಆಯ್ಕೆಗೊಂಡರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com