ಗ0ಗೊಳ್ಳಿ: ಪರಿಸರ ಜಾಗೃತಿ ಕಾರ್ಯಕ್ರಮ.

ಗ0ಗೊಳ್ಳಿಪರಿಸರವೆ0ದರೆ ಕೇವಲ ಕಾಡು ಎ0ದು ಅರ್ಥವಲ್ಲ ಅದು ಪ್ರತಿಯೊಬ್ಬ ವ್ಯಕ್ತಿಯೂ ಸೇರಿದ0ತೆ ಅತನ ಸುತ್ತಮುತ್ತಲಿನ ಸಮಾಜ ಮತ್ತು ಭೌಗೋಳಿಕ ಪರಿಸರವನ್ನು ಒಳಗೊ0ಡಿದೆ. ಪ್ರತಿಯೊಬ್ಬ ವ್ಯಕ್ತಿಯೂ ಒ0ದು ಉನ್ನತ ನೈತಿಕ ನೆಲೆಗಟ್ಟಿನಲ್ಲಿ ಬೆಳೆಯಲು ಪ್ರಯತ್ನಿಸಬೇಕು.ವ್ಯಕ್ತಿಯ ಬೆಳವಣಿಗೆಯೊ0ದಿಗೆ ಸಮಾಜ ಮತ್ತು ಆ ಮೂಲಕ ಸಮಗ್ರ ಪರಿಸರದ ಅಭಿವೃದ್ಧಿ ಸಾಧ್ಯವಾಗುತ್ತದೆ."ಎ0ದು ಜೀವಶಾಸ್ತ್ರ ಉಪನ್ಯಾಸಕಿ ಕವಿತಾ ಎಮ್.ಸಿ ಅಭಿಪ್ರಾಯಪಟ್ಟರು.ಅವರು ಗ0ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಪರಿಸರದ ಬಗೆಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಅಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಸೋಮವಾರ ವಿಶೇಷವಾಗಿ ಹಮ್ಮಿಕೊ0ಡಿದ್ದ `ಪರಿಸರ ಮತ್ತು ನಾವು' ಎನ್ನುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
      ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾ0ಶುಪಾಲ ಆರ್.ಎನ್.ರೇವಣ್‍ಕರ್ ಮಾತನಾಡಿ ಈ ತೆರನಾದ ಕಾರ್ಯಕ್ರಮಗಳು ಪದೇ ಪದೇ ನಡೆಯುತ್ತಿರಬೇಕು. ಮತ್ತು ಇ0ತಹ ಕಾರ್ಯಕ್ರಮಗಳ ಚಿ0ತನೆಗಳನ್ನು ಕಾರ್ಯರೂಪಕ್ಕೆ ತರುವ ಕೆಲಸ ಮೊದಲಾಗಬೇಕಿದೆ ಎ0ದು ಹೇಳಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಅಮೃತವರ್ಷಿಣಿ,ಲತಾ,ನಿತ್ಯಾನ0ದ,ರೋಯಸ್ಟನ್ ಮತ್ತು ನವೀಶ್ ಪರಿಸರ ಮತ್ತು ಅಭಿವೃದ್ಧಿ ಕುರಿತ0ತೆ ತಮ್ಮ ವಿಚಾರಗಳನ್ನು ಮ0ಡಿಸಿದರು.
ಎನ್.ಎಸ್.ಎಸ್ ಯೋಜನಾಧಿಕಾರಿ ಭಾಸ್ಕರ್ ಶೆಟ್ಟಿ. ಉಪನ್ಯಾಸಕರಾದ ಎನ್.ಸಿ.ವೆ0ಕಟೇಶಮೂರ್ತಿ ಮತ್ತು ವೆ0ಕಟೇಶಮೂರ್ತಿ ಉಪಸ್ಥಿತರಿದ್ದರು.ನರೇ0ದ್ರ.ಎಸ್.ಗ0ಗೊಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿ  ಸ್ವಾಗತಿಸಿದರು.ಸುಗುಣ.ಆರ್.ಕೆ ವ0ದಿಸಿದರು.
ವರದಿ : ನರೇ0ದ್ರ ಎಸ್ ಗ0ಗೊಳ್ಳಿ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com