ವಿದ್ಯಾರ್ಥಿನಿ ಅಸಹಜ ಸಾವು. ಐ.ಜಿ. ಭೇಟಿ

ಬೈಂದೂರು:  ವಿದ್ಯಾರ್ಥಿನಿ ರತ್ನಾ ಕೊಠಾರಿ ಸಾವು ಸಂಭವಿಸಿದ ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಐ.ಜಿ.ಪಿ ಅಮೃತಪಾಲ್‌ ಭೇಟಿ ನೀಡಿದರು. ಸಾವಂತ ಗುಡ್ಡದ ಸ್ಥಳವನ್ನು ಪರಿಶೀಲಿಸಿ ಹಿರಿಯ ಪೋಲಿಸ್‌ ಅಧಿಕಾರಿಗಳು ಹಾಗೂ ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದರು. 
    ಆ ಬಳಿಕ ಬೈಂದೂರು ಆರಕ್ಷಕ ಠಾಣೆಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ  ಶಿರೂರು ಪ.ಪೂ ಕಾಲೇಜಿನ ವಿದ್ಯಾರ್ಥಿನಿ ಪ್ರಕರಣ ನನ್ನ ಆಧಿಕಾರಾವಧಿಯಲ್ಲಿ ಕಂಡ ಅತ್ಯಂತ ಜಟಿಲ ಪ್ರಕರಣವಾಗಿದೆ. ಶವವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವುದರಿಂದ ಯಾವುದೇ ಚಹರೆಗಳು ಗೊಚರಿಸುತ್ತಿಲ್ಲ ಅಲ್ಲದೇ ಸೂಕ್ತ ಸಾಕ್ಷ್ಯಗಳ ಅಭಾವ ತನಿಖೆಗೆ ತೊಡಕಾಗಿ ಪರಿಣಮಿಸಿದೆ. ಇದು ಹಣ ಅಥವಾ ಚಿನ್ನಕ್ಕಾಗಿ ಹತ್ಯೆನಡೆದಿಲ್ಲ ಎನ್ನುವುದು ಸ್ಪಷ್ಟವಾಗಿದೆ.  ಸ್ಥಳೀಯರಿಂದಲೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಹೀಗಾಗಿ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಆರಕ್ಷಕ ಇಲಾಖೆ ವಿವಿಧ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದು ವೈದ್ಯಕೀಯ ವರದಿಯ ಪೂರ್ಣ ಮಾಹಿತಿ ಬಂದ ಬಳಿಕ ಸ್ಪಷ್ಟತೆ ದೊರೆಯಲಿದೆ ಈ ನೆಲೆಯಲ್ಲಿ ಸಾರ್ವಜನಿಕರ ಸಹಕಾರವೂ ಅಗತ್ಯ. ಇಲಾಖೆಗೆ ಒತ್ತಡ ಹೇರುವುದು ಸರಿಯಲ್ಲ ಎಂದರು.

ಈ ಸಂಧರ್ಭದಲ್ಲಿ ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ಬೋರಲಿಂಗಯ್ಯ, ಡಿ.ವೈ.ಎಸ್‌.ಪಿ. ಸಿ.ಬಿ ಪಾಟೀಲ್‌, ಡಿ.ಸಿ.ಐ.ಬಿ . ಇನ್ಸ್ಪೆಕ್ಟರ್ ಜಯಶಂಕರ, ವೃತ್ತ ನಿರೀಕ್ಷಕರಾದ ಸುನಿಲ್‌ ಕುಮಾರ್‌, ಮಾರುತಿ ನಾಯ್ಕ, ದಿವಾಕರ ಕುಂದಾಪುರ, ಸುದರ್ಶನ್‌ ಬೈಂದೂರು, ಠಾಣಾಧಿಕಾರಿ ಸಂತೋಷ ಕಾಯ್ಕಿಣಿ ಮುಂತಾದವರು ಹಾಜರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com