ಖಂಬದಕೋಣೆ: ನಾಟಿ ಯಂತ್ರ ಪ್ರಾತ್ಯಕ್ಷತೆ

ಬೈಂದೂರು: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ., ಉಪ್ಪುಂದ ಹಾಗೂ ಸಂಘವು ಪ್ರಾಯೋಜಿಸಿರುವ ರೈತ ಶಕ್ತಿ, ರೈತ ಸೇವಾ ಕೂಟ ಉಪ್ಪುಂದ, ಅನ್ನದಾತ ರೈತ ಗುಂಪು ಹೊಸ್ಕೋಟೆ ಇವರ ಜಂಟಿ ಆಶ್ರಯದಲ್ಲಿ ಜು.5ರಂದು ಶನಿವಾರ ಮಧ್ಯಾಹ್ನ 3ಕ್ಕೆ ಹೊಸ್ಕೋಟೆ ಬೊಬ್ಬರ್ಯನ ಕಟ್ಟೆ ವಠಾರದಲ್ಲಿ ಸಂಘದ ಸದಸ್ಯ ಕುಷ್ಟು ಪೂಜಾರಿ ಹೊಸ್ಕೋಟೆ ಇವರ ನಾಟಿ ಯಂತ್ರದಿಂದ ನಾಟಿ ಯಂತ್ರ ಪ್ರಾತ್ಯಕ್ಷಿತೆ ಮಾಹಿತಿ ಕಾರ್ಯಕ್ರಮವು ಜರಗಲಿದೆ.

ಸಂಘದ ಅಧ್ಯಕ್ಷ ಎಸ್‌. ಪ್ರಕಾಶ್ಚಂದ್ರ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಹಾಗೂ ಬೆ„ಂದೂರು ಕೃಷಿ ಅಧಿಕಾರಿ ಗಾಯತ್ರಿದೇವಿ ಇವರು ಭಾಗವಹಿಸಿ ಮಾಹಿತಿ ನೀಡಲಿರುವರು. ಎಗ್ರಿ ಮಾರ್ಟ್‌ ಈಸಿ ಲೆ„ಫ್‌ ಎಂಟರ್‌ಪ್ರŒ„ಸಸ್‌ ಇವರಿಂದ ನಾಟಿಯಂತ್ರ, ಮೊಟರೈಸ್ಡ್ ಕೋಲೋವಿಡರ್‌, ಪವರ್‌ ಸ್ಪೇಯರ್‌ ಹಾಗೂ ಇತರ ಕೃಷಿ ಯಂತ್ರಗಳು ಮತ್ತು ಕೃಷಿ ಉಪಕರಣಗಳು ಪ್ರದರ್ಶನಗೊಳ್ಳಲಿರುವುದು ಎಂದು ಮುಖ್ಯಕಾರ್ಯನಿರ್ವಹಣಾಧಿಕಾರಿ ಮಮತಾ ವಿ. ಮಯ್ಯ ಇವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com