ಮುಕ್ತ ವಿ.ವಿ. ಪ್ರವೇಶ: ಸೂಚನೆ

ಉಡುಪಿ: ಕರ್ನಾಟಕ ರಾಜ್ಯ ಮುಕ್ತ ವಿ.ವಿ. ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ ಎಂಬಂತೆ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಸೇವೆ ನೀಡುವ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರಗಳಲ್ಲಿ (ಉಡುಪಿ ಬನ್ನಂಜೆಯಲ್ಲಿರುವ ಹಳೆಯ ಜಿ.ಪಂ. ಕಟ್ಟಡ, ಮಂಗಳೂರಿನಲ್ಲಿ ಲೇಡಿಹಿಲ್‌) ಪ್ರಾದೇಶಿಕ ಕೇಂದ್ರ ಕಚೇರಿಯನ್ನು ತೆರೆದಿದೆ.

ಬಿ.ಎ., ಬಿ.ಕಾಂ., ಎಂ. ಎ., ಎಂ.ಕಾಂ. ಮತ್ತು ಇನ್ನಿತರ ಕೋರ್ಸುಗಳ ಅಧ್ಯಯನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ವಿವಿಧ ಶಿಕ್ಷಣ ಕ್ರಮಗಳ ಪುಸ್ತಕಗಳನ್ನು ನಿಗದಿತ ದರಗಳಲ್ಲಿ ನೀಡಲಾಗುವುದು. ದ್ವಿತೀಯ/ ತೃತೀಯ ಬಿ.ಎ., ಬಿ.ಕಾಂ. ಹಾಗೂ ಅಂತಿಮ ಎಂ.ಎ, ಎಂ.ಕಾಂ. ಶಿಕ್ಷಣ ಕ್ರಮಗಳಿಗೆ ಮೂಲ ದಾಖಲಾತಿಗಳನ್ನು ಪರಿಶೀಲಿಸಿ ನಿಗದಿತ ಶುಲ್ಕ ಪಾವತಿಸಿದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಿ ಭೋಧನಾ ಸಾಮಗ್ರಿಗಳನ್ನು ವಿತರಿಸಲಾಗುವುದು.

ಪ್ರಾದೇಶಿಕ ಕೇಂದ್ರದಲ್ಲಿ ಈಗಾಗಲೇ ಪ್ರವೇಶ ಪಡೆದ ವಿದ್ಯಾರ್ಥಿಗಳು ದ್ವಿತೀಯ/ ತೃತೀಯ ಬಿ.ಎ./ ಬಿ.ಕಾಂ. ಹಾಗೂ ಅಂತಿಮ ಎಂ.ಎ/ ಎಂ.ಕಾಂ. ಪ್ರವೇಶಗಳನ್ನು ನೇರವಾಗಿ ಪ್ರಾದೇಶಿಕ ಕೇಂದ್ರಗಳಲ್ಲಿ ಪಡೆಯಬಹುದು.

ಬೇರೆ ವಿ.ವಿ.ಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಮುಕ್ತ ವಿ.ವಿ.ಯಲ್ಲಿ 2ನೇ ವರ್ಷಕ್ಕೆ ನೇರವಾಗಿ ಪ್ರವೇಶ ಬಯಸುವವರು ವಿವರಣಾ ಪುಸ್ತಕ ಪಡೆದು, ಪ್ರವೇಶ ಶುಲ್ಕ ಮತ್ತು ವಿ.ವಿ. ಬದಲಾವಣೆ ಶುಲ್ಕ ಎರಡನ್ನು ಪಾವತಿಸಿ ನೇರವಾಗಿ ವಿ.ವಿ. ಪ್ರಧಾನ ಕಚೇರಿ ಉಪಕುಲಸಚಿವರು (ಪ್ರವೇಶಾತಿ) ಇಲ್ಲಿ ಪ್ರವೇಶ ಪಡೆಯಬೇಕು.

ಹೆಚ್ಚಿನ ವಿವರಣೆ ಹಾಗೂ ಡಿಪ್ಲೊಮಾ, ಬಿ.ಎಡ್‌., ಎಂ. ಎಡ್‌. ಸರ್ಟಿಫಿಕೇಟ್‌ ಕೋರ್ಸು, ಇನ್ನಿತರ ಕೋರ್ಸುಗಳ ಎಲ್ಲಾ ಮಾಹಿತಿಗಳನ್ನು ಪ್ರಾದೇಶಿಕ ಕೇಂದ್ರ ಕಚೇರಿಯಲ್ಲಿ ಪಡೆಯಬಹುದು ಎಂದು ಪ್ರಾದೇಶಿಕ ನಿರ್ದೇಶಕರು ತಿಳಿಸಿರುತ್ತಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com