ಎಸ್.ಸಿ.ಡಿ.ಸಿ.ಸಿ ಬ್ಯಾಂಕ್: 76ನೇ ನೂತನ ಕಂಡ್ಲೂರು ಶಾಖೆ ಉದ್ಘಾಟನೆ

ಕಂಡ್ಲೂರು: ರೈತರಿಗೆ ಅನುಕೂಲವಾಗತಕ್ಕಂತಹ ಸರಕಾರಿ ಯೋಜನೆಯ ಅನುಷ್ಠಾನಗೊಳಿಸುವಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಧಾನ ಪಾತ್ರ ವಹಿಸುತ್ತಾ ಬಂದಿದೆ. ಶೇ.3ರ ಬಡ್ಡಿದರದಲ್ಲಿ ರೂ.10ಲಕ್ಷದ ತನಕ ಸಾಲ ವಿತರಿಸುವ ಯೋಜನೆಯಡಿಯಲ್ಲಿಯೂ ಬ್ಯಾಂಕ್ ಕೈಜೋಡಿಸಿದೆ. ಬ್ಯಾಂಕ್ ರೈತರ ಜೀವನಾಡಿ ಎಂಬುವುದನ್ನು ಸಾಬೀತುಪಡಿಸಿದೆ ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ಶನಿವಾರ ಕಂಡ್ಲೂರು ಸರಕಾರಿ ಆಸ್ಪತ್ರೆ ಎದುರಿನ ಸಂಕೀರ್ಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ 76ನೇ ನೂತನ ಕಂಡ್ಲೂರು ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು. 

  ಕಾವ್ರಾಡಿ ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ ಜಿ.ಸೀತಾರಾಮ ಶೆಟ್ಟಿ ಭದ್ರತಾ ಕೋಶ ಮತ್ತು ಕಾವ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ದಸ್ತಗೀರ್ ಸಾಹೇಬ್ ಗಣಕೀಕರಣ ಉದ್ಘಾಟಿಸಿದರು. 

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕೊರಗ ಪೂಜಾರಿಯವರಿಗೆ ಪ್ರಥಮ ಠೇವಣಿ ಪತ್ರ, ಕಾಲಿಫಾ ಅಬ್ದುಲ್ ಮುನಾಫ್ ಮತ್ತು ಪಿ.ಸಿ.ಗಣೇಶ್ ಭಟ್ ಅವರಿಗೆ ಪ್ರಥಮ ಸಂಚಯ ಖಾತೆಯ ಪಾಸ್ ಪುಸ್ತಕ ವಿತರಿಸಲಾಯಿತು. ಕಷ್ಣ ಮೊಗವೀರ ಅವರಿಗೆ ಪ್ರಥಮ ಸಾಲಪತ್ರ, ಕೊರಗಪ್ಪ ಮಾಸ್ತರ್ ಅವರಿಗೆ ಆಪ್ತ ಸಾಲ, ವೈ.ಮಹಾಬಲ ತೋಳಾರ್ ಅವರಿಗೆ ಪ್ರಥಮ ಲಾಕರ್ ಕೀ ವಿತರಿಸಲಾಯಿತು. 

    ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನಡಿ ಕಾರ್ಯಾಚರಿಸುವ ನೂತನ 5 ನವೋದಯ ಸ್ವಸಹಾಯ ಸಂಘಗಳನ್ನು ಉದ್ಘಾಟಿಸಲಾಯಿತು. ಅರ್ಹ ಫಲಾನುಭವಿಗಳಿಗೆ ಚೈತನ್ಯ ವಿಮಾ ಚೆಕ್ ಹಸ್ತಾಂತರಿಸಲಾಯಿತು. ನಿರಖು ಠೇವಣಿದಾರರಿಗೆ ಹಮ್ಮಿಕೊಂಡ ಅದಷ್ಟ ಬಹುಮಾನ ಯೋಜನೆಯ ಚಿನ್ನದ ನಾಣ್ಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಟ್ಟಡ ಮಾಲೀಕ ಉದಯ ಶೇರೆಗಾರ್ ಮತ್ತು ಶಾಖಾ ವ್ಯವಸ್ಥಾಪಕ ಉದಯ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಉಳಿತಾಯ ಖಾತೆ ಸಂಗ್ರಹಿಸಿದ ನವೋದಯ ಸ್ವಸಹಾಯ ಸಂಘದ ಪ್ರೇರಕರನ್ನು, ನವೋದಯ ವಲಯ ಮೇಲ್ವಿಚಾರಕರು ಹಾಗೂ ಬ್ಯಾಂಕಿನ ಮೇಲ್ವಿಚಾರಕರನ್ನು ಅಭಿನಂದಿಸಲಾಯಿತು. 

        ತಾಪಂ ಸದಸ್ಯ ಪ್ರದೀಪ್‌ಕುಮಾರ ಶೆಟ್ಟಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಿ.ರಘುರಾಮ ಶೆಟ್ಟಿ, ಎಂ.ವಾದಿರಾಜ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಬಸ್ರೂರು ವಿಎಸ್‌ಎಸ್ ಅಧ್ಯಕ್ಷ ಗೋಪಾಲ ಪೂಜಾರಿ, ಕುಂದಾಪುರ ವಿಎಸ್‌ಎಸ್ ಅಧ್ಯಕ್ಷ ಮಧುಕರ್, ಟಿಎಪಿಸಿಎಂಎಸ್ ಅಧ್ಯಕ್ಷ ಬಾಂಡ್ಯ ಸುಧಾಕರ ಶೆಟ್ಟಿ, ಉಳ್ಳೂರು- ಮಚ್ಚಟ್ಟು ವಿಎಸ್‌ಎಸ್ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಸಿದ್ಧಾಪುರ ವಿಎಸ್‌ಎಸ್ ಅಧ್ಯಕ್ಷ ವಾಸುದೇವ ಪೈ, ಹರ್ಕೂರು ವಿಎಸ್‌ಎಸ್ ಅಧ್ಯಕ್ಷ ಆಲೂರು ಮಂಜಯ್ಯ ಶೆಟ್ಟಿ ಉಪಸ್ಥಿತರಿದ್ದರು. ಶ್ರೇಯಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ರಾಜು ಪೂಜಾರಿ ಸ್ವಾಗತಿಸಿದರು. ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು. ಡಿಸಿಸಿ ಬ್ಯಾಂಕ್ ಕುಂದಾಪುರ ಶಾಖೆ ಮಹಾಪ್ರಬಂಧಕ ಬಾಬು ಬಿಲ್ಲವ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com