ರತ್ನಾ ಕೊಠಾರಿ ಮನೆಗೆ ಕೇಮಾರು ಶ್ರೀ ಭೇಟಿ

ಶಿರೂರು: ಕಾಲೇಜು ವಿದ್ಯಾರ್ಥಿನಿ ರತ್ನಾ ಕೊಠಾರಿ ಅಸಹಜ ಸಾವು ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇಲ್ಲದಿದ್ದಲ್ಲಿ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಕೇಮಾರು ಸಾಂದೀಪನಿ ಆಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
  ಅವರು ಶಿರೂರು ಆಲಂದೂರು ಕೋಣನಮಕ್ಕಿಯಲ್ಲಿರುವ ರತ್ನ ಕೊಠಾರಿಯ ಮನೆಗೆ ಭೇಟಿ ನೀಡಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. 
     ಈ ಪ್ರಕರಣದಲ್ಲಿ ಇಲಾಖೆಯ ಕಾರ‌್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸ್ವಾಮೀಜಿ, ಪ್ರಕರಣವನ್ನು ವಾರದೊಳಗೆ ಭೇದಿಸಿ, ನೊಂದ ಕುಟುಂಬಕ್ಕೆ ನಿರೀಕ್ಷಿತ ಫಲಿತಾಂಶ ನೀಡುವ ವಿಶ್ವಾಸವಿದೆ ಎಂದರು. ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದು ವಿಷಾಧನೀಯ ಸಂಗತಿ ಎಂದ ಸ್ವಾಮೀಜಿ ಎಲ್ಲವನ್ನೂ ಇಲಾಖೆ ನಿಗಾ ಇಡಲು ಸಾಧ್ಯವಿಲ್ಲ, ಸಾರ್ವಜನಿಕರ ಸಹಕಾರವು ಅಗತ್ಯ. ಅತ್ಯಾಚಾರಿಗಳನ್ನು ಸಾಮಾಜಿಕವಾಗಿ ಬಹಿಷ್ಕರಿಸಬೇಕು. ಆಗ ಮಾತ್ರ ಇಂತಹ ಪ್ರಕರಣ ಮರುಕಳಿಸದಂತೆ ಮಾಡಬಹುದು ಎಂದರು.
   ಈ ಸಂಧರ್ಭದಲ್ಲಿ ದಯಾನಂದ ಹೆಜಮಾಡಿ ಹಾಗೂ ಹಿಂದೂ ಯುವಸೇನೆ ಕೋಟ ಪಡುಕೇರೆ ವತಿಯಿಂದ ರತ್ನಾ ಕುಟುಂಬದವರಿಗೆ ಆರ್ಥಿಕ ಸಹಾಯ ಮಾಡಲಾಯಿತು. ಕೊಡಚಾದ್ರಿ ಸಂರಕ್ಷಣ ಸಮಿತಿಯ ಅಧ್ಯಕ್ಷ ಕೆ.ಕೆ. ಸಾಬು, ಬಿಜೆಪಿ ರಾಜ್ಯ ರೈತಮೋರ್ಚಾದ ಉಪಾಧ್ಯಕ್ಷ ದೀಪಕ್ ಕುಮಾರ ಶೆಟ್ಟಿ, ವಸಂತ ಗಿಳಿಯಾರು, ರಾಘವೇಂದ್ರ ಹಾರ್ಮಕ್ಕಿ, ರವಿ ಶೆಟ್ಟಿ ಬ್ರಹ್ಮಾವರ ಮತ್ತಿತರರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com