ಮಾರಣಕಟ್ಟೆ ಪರಿಸರದಲ್ಲಿ ಮಂಗಳವಾರ ಸುರಿದ ಭಾರೀ ಮಳೆತ ಪರಿಣಾಮ ಚಕ್ರಾ ಉಪನದಿಯು ಉಕ್ಕಿ ಹರಿಯುತ್ತಿದ್ದು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದೆ.
ಕಳೆದ ವರ್ಷ ಜುಲೈ ತಿಂಗಳಲ್ಲಿ ಇದೇ ರೀತಿಯಲ್ಲಿ ದೇವಾಲಯ ಜಲಾವೃತಗೊಂಡಿತ್ತು. ಚಕ್ರ ನದಿಯಲ್ಲಿ ನೀರು ಅಪಾಯದ ಮಟ್ಟಕ್ಕೇರುತ್ತಿದ್ದು ಕಂದಾಯ ಹಾಗೂ ಪೊಲೀಸ್ ಇಲಾಖಾ ಅಧಿಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
ಕೊಲ್ಲೂರಿನಲ್ಲಿ ಭಾರೀ ಮಳೆ: ಕೊಲ್ಲೂರು ಪರಿಸರದಲ್ಲಿ ಧಾರಾಕಾರ ಮಳೆಯಿಂದಾಗಿ ಸೌಪರ್ಣಿಕಾ ನದಿ ಉಕ್ಕಿ ಹರಿಯುತ್ತಿದೆ. ಇಡೂರು, ವಂಡ್ಸೆ ಪರಿಸರದಲ್ಲಿ ಮುಖ್ಯ ರಸ್ತೆ ಜಲಾವೃತವಾಗಿದೆ. ಕೆರಾಡಿ ಹಾಗೂ ಬೆಳ್ಳಾಲದಲ್ಲಿ ವಿದ್ಯುತ್ ಸಂಪರ್ಕದಲ್ಲಿ ತೊಡಕಾಗಿದೆ.
0 comments:
Post a Comment