ಕೊಲ್ಲೂರು ದೇಗುಲದ ವತಿಯಿಂದ ಸಹಾಯಧನ ವಿತರಣೆ

ಕೊಲ್ಲೂರು: ಹೃದಯದ ತೊಂದರೆ, ಕ್ಯಾನ್ಸರ್‌ ಮತ್ತು ಕಿಡ್ನಿ ವೈಫ‌ಲ್ಯದಿಂದ ಬಳಲುತ್ತಿರುವ 87 ಜನ ರೋಗಿಗಳಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವತಿಯಿಂದ 9,17,000 ರೂ. ಮೊತ್ತವನ್ನು ಜು. 8ರಂದು ನಡೆದ ಕಾರ್ಯಕ್ರಮದಲ್ಲಿ ಸಹಾಯಧನ ರೂಪದಲ್ಲಿ ಚೆಕ್‌ಗಳ ಮೂಲಕ ವಿತರಿಸಲಾಯಿತು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕೃಷ್ಣಪ್ರಸಾದ ಅಡ್ಯಂತಾಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯನಿರ್ವಾಹಣಾಧಿಕಾರಿ ಎಲ್‌.ಎಸ್‌. ಮಾರುತಿ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಕೃಷ್ಣಮೂರ್ತಿ, ಅಧಿಧೀಕ್ಷಕ ರಾಮಕೃಷ್ಣ ಅಡಿಗ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಡಾ| ಅತುಲ್‌ ಕುಮಾರ್‌ ಶೆಟ್ಟಿ, ರಾಜೇಶ್‌ ಕೆ.ಎಂ., ಜಯಾನಂದ ಹೋಬಳಿದಾರ್‌, ಕಲ್ಪನಾ ಭಾಸ್ಕರ್‌ ಹಾಗೂ ಸವಿತಾ ಯು. ದೇವಾಡಿಗ ಉಪಸ್ಥಿತರಿದ್ದರು. ಮಂಜುನಾಥ ಶೇರಿಗಾರ್‌ ಕಾರ್ಯಕ್ರಮ ನಿರ್ವಹಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com