ಕುಂದಾಪುರ ಲಯನ್ಸ್‌ ಕ್ಲಬ್‌ ,ಲಯನೆಸ್‌ ಪದಪ್ರಧಾನ

ಕುಂದಾಪುರ: ಲಯನ್ಸ್‌ ಕ್ಲಬ್‌ ಮತ್ತು ಲಯನೆಸ್‌ ಕ್ಲಬ್‌ ಕುಂದಾಪುರದ ಪದಪ್ರಧಾನ ಸಮಾರಂಭವು ಜು.9ರಂದು ಭಂಡಾರ್‌ಕಾರ್ ಕಾಲೇಜಿನ ಕೋಯಾ ಕುಟ್ಟಿ ಸಭಾಭವನದಲ್ಲಿ ಜರಗಿತು.
     2ನೇ ವೈಸ್‌ ಡಿಸ್ಟಿಕ್‌ ಗವರ್ನರ್‌ ದಿವಾಕರ ಶೆಟ್ಟಿ ಪದಪ್ರಧಾನ ಸಮಾರಂಭ ನೆರವೇರಿಸಿ ಕ್ಲಬ್‌ನ ನೂತನ ಅಧ್ಯಕ್ಷರಿಗೆ ಹಾಗೂ ಪದಾಧಿಕಾರಿಗಳಿಗೆ ಶುಭಹಾರೈಸಿ, ಮಾತನಾಡಿ ಲಯನ್ಸ್‌ ಕ್ಲಬ್‌ಗಳು ಒಳ್ಳೆಯ ಸಮಾಜ ಮುಖೀ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದ ಬದಲಾವಣೆಯಲ್ಲಿ ಒಂದು ಮುಖ್ಯ ಪಾತ್ರವಹಿಸಬೇಕೆಂದು ಹೇಳಿದರು.
       ನೂತನ ಅಧ್ಯಕ್ಷ ಡಾ| ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಅಲ್ತಾರು ಮೋಹನ್‌ ಶೆಟ್ಟಿ , ಲಯನೆಸ್‌ ಅಧ್ಯಕ್ಷೆ ಸುನೀತಾ ಬಿ. ಶೆಟ್ಟಿ , ಕಾರ್ಯದರ್ಶಿ ಭವಾನಿ ಎಂ. ಶೆಟ್ಟಿ ಯವರ ತಂಡಕ್ಕೆ ಪದವಿ ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಕೆ. ಮೋಹನ್‌ ಶೆಟ್ಟಿ , ಖಜಾಂಜಿ ಹೆಬ್ರಿಬೀಡು ದೇವಪ್ಪ ಮಲ್ಲಿ ಅವರು ಜಂಟಿಯಾಗಿ ಪ್ರತಿಭಾವಂತ ವಿದ್ಯಾರ್ಥಿ ರಂಜಿತ್‌ ಕೊಠಾರಿ ಹಾಗೂ ಡಾ| ಎಂ.ವಿ. ಕುಲಾಲ್‌ ಅವರು ಪ್ರತಿಭಾವಂತ ವಿದ್ಯಾರ್ಥಿ ಶೃತಿ ಅವರಿಗೆ ಧನ ಸಹಾಯ ನೀಡಿದರು.
       ಕಾರ್ಯಕ್ರಮದಲ್ಲಿ ಝೋನಲ್‌ ಚೇರ್‌ಮ್ಯಾನ್‌ ಸುಧಾಕರ ಆಚಾರ್‌, ರೀಜನಲ್‌ ಚೇರ್‌ಮ್ಯಾನ್‌ ಪ್ರಕಾಶ್‌ ಬೆಟ್ಟಿನ್‌, ಮಾಜಿ ಡಿಸ್ಟಿಕ್‌ ಗವರ್ನರ್‌ಗಳಾದ ಪ್ರಕಾಶ್‌ ಸೋನ್ಸ್‌ , ಕೆ.ಜಯಕರ ಶೆಟ್ಟಿ , ಖಜಾಂಜಿ ಹೆಬ್ರಿಬೀಡು ದೇವಪ್ಪ ಮಲ್ಲಿ ಹಾಗೂ ಜಯಂತಿ ದೇವಪ್ಪ ಮಲ್ಲಿ , ಮಾಜಿ ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ ಕಾವ್ರಾಡಿ ಮತ್ತು ಸುವಾಸಿನಿ ವಿ. ಶೆಟ್ಟಿ ಉಪಸ್ಥಿತರಿದ್ದರು.
       ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೂತನ ಅಧ್ಯಕ್ಷ ಡಾ| ಬಾಲಕೃಷ್ಣ ಶೆಟ್ಟಿ ವಹಿಸಿದ್ದರು. ಮಾಜಿ ಅಧ್ಯಕ್ಷ ಕೆ. ನಾಗರಾಜ್‌ ಸ್ವಾಗತಿಸಿದರು, ಎಂಜಿನಿಯರ್‌ ರಮಾನಂದ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕೆ. ಮೋಹನ್‌ ಶೆಟ್ಟಿ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com