ಕುಂದಾಪುರ ತಾಲೂಕು ಬಂದ್ ಯಶಸ್ವಿ

ಕುಂದಾಪುರ: ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ರತ್ನಾ ಕೊಠಾರಿ ಸಾವು ಖಂಡಿಸಿ ನ್ಯಾಯ ಆಗ್ರಹಿಸಿ ಬುಧವಾರ ಕೆಲವೆಡೆ ಆಂಶಿಕ ಬಂದ್ ನಡೆದಿದೆ. 

ತೆಕ್ಕಟ್ಟೆ, ಕೋಟೇಶ್ವರ, ಬೈಂದೂರು, ಉಪ್ಪುಂದ, ಶಿರೂರು, ವಂಡ್ಸೆ, ನೇರಳಕಟ್ಟೆ, ಚಿತ್ತೂರು, ಕುಂದಾಪುರ ನಗರ ವ್ಯಾಪ್ತಿಯಲ್ಲಿ ಸಂಪೂರ್ಣ ಬಂದ್ ಆಚರಿಸಲಾಗಿದ್ದರೆ, ಸಿದ್ಧಾಪುರ, ಶಂಕರನಾರಾಯಣ, ಹಾಲಾಡಿ, ಗೋಳಿಯಂಗಡಿ, ಕೊಲ್ಲೂರು ಭಾಗದಲ್ಲಿ ಆಂಶಿಕ ಬಂದ್ ನಡೆಸಲಾಗಿತ್ತು. ಪೇಟೆ ಪ್ರದೇಶಗಳಲ್ಲಿ ಬಂದ್ ಪರಿಣಾಮ ಬೀರಿದ್ದರೆ ಗ್ರಾಮಾಂತರ ಪ್ರದೇಶಗಳಲ್ಲಿ ಬಂದ್ ಯಾವುದೇ ಪರಿಣಾಮ ಬೀರಿಲ್ಲ. 

ಖಾಸಗಿ ಬಸ್ ಓಡಾಟ ಇಲ್ಲದಿರುವುದರಿಂದ ಜನರು ತೊಂದರೆ ಅನುಭವಿಸುವಂತಾಯಿತು. ಶಾಲಾ ಕಾಲೇಜು ವಿದ್ಯಾರ್ಥಿಗಳು ಪರದಾಡಿದರು. ಅನಿವಾರ್ಯವಾಗಿ ಶಾಲೆ, ಕಾಲೇಜುಗಳಿಗೆ ರಜೆ ನೀಡುವಂತಾಯಿತು. 

ಖಾಸಗಿ ಬಸ್‌ಗಳು ಓಡಾಟ ಸ್ಥಗಿತಗೊಳಿಸಿದ್ದರಿಂದ ಸರಕಾರಿ ಬಸ್‌ಗಳು ಕೊರತೆ ತುಂಬುವ ಕೆಲಸ ಮಾಡಿದವು. ಜನರಿಗೆ ತೊಂದರೆಯಾಗದ ರೀತಿಯಲ್ಲಿ ಮಂಗಳೂರು, ಉಡುಪಿ, ಬೈಂದೂರು, ಸಿದ್ಧಾಪುರ, ಕೊಲ್ಲೂರು ಭಾಗಕ್ಕೆ ಹೆಚ್ಚುವರಿ ಸರಕಾರಿ ಬಸ್‌ಗಳು ಓಡಾಟಕ್ಕೆ ಚಾಲನೆ ನೀಡಲಾಗಿದ್ದು ನಾಗರಿಕರು ನಿಟ್ಟಿಸಿರುಬಿಡುವಂತಾಯಿತು. ಸರಕಾರಿ ಕಚೇರಿಗಳು, ಬ್ಯಾಂಕಿಂಗ್, ಔಷಧಾಲಯ ಎಂದಿನಂತೆ ಕಾರ್ಯಾಚರಿಸಿವೆ. 
ಬೈಂದೂರು ಹಿರಿಯ ನಾಗರಿಕ ವೇದಿಕೆ, ರೈತ ಸಂಘ ಕುಂದಾಪುರ ಬಂದ್‌ಗೆ ಕರೆ ನೀಡಿತ್ತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com